೧ ಪೂರ್ವಕಾಲವೃತ್ತಾಂತ 15:15

ಮೋಶೆಯು ಆಜ್ಞಾಪಿಸಿದ ಕರ್ತನ ವಾಕ್ಯದ ಪ್ರಕಾರ ಲೇವಿಯರ ಮಕ್ಕಳು ಕೋಲುಗಳನ್ನು ಹಾಕಿ ದೇವರ ಮಂಜೂಷ ವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 15

13ನೀವು ಮೊದಲಿನ ಹಾಗೆ ಮಾಡದೆ ಇದದ್ದರಿಂದ ಕರ್ತನಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದನು. ನ್ಯಾಯದ ಪ್ರಕಾರ ನಾವು ಆತನನ್ನು ಹುಡುಕಲಿಲ್ಲ ಅಂದನು.

14ಆಗ ಇಸ್ರಾಯೇಲಿನ ದೇವರಾದ ಕರ್ತನ ಮಂಜೂ ಷವನ್ನು ತರುವದಕ್ಕೆ ಯಾಜಕರೂ ಲೇವಿಯರೂ ತಮ್ಮನ್ನು ಪರಿಶುದ್ಧ ಮಾಡಿಕೊಂಡರು.

15ಮೋಶೆಯು ಆಜ್ಞಾಪಿಸಿದ ಕರ್ತನ ವಾಕ್ಯದ ಪ್ರಕಾರ ಲೇವಿಯರ ಮಕ್ಕಳು ಕೋಲುಗಳನ್ನು ಹಾಕಿ ದೇವರ ಮಂಜೂಷ ವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು.

16ಇದಲ್ಲದೆ ದಾವೀದನು ವಿಶೇಷವಾದ ವೀಣೆ ಗಳನ್ನೂ ಕಿನ್ನರಿಗಳನ್ನೂ ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನು ಎತ್ತುವ ಹಾಗೆ ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವ ದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.

17ಹಾಗೆಯೇ ಲೇವಿಯರು ಯೋವೇಲನ ಮಗನಾದ ಹೇಮಾನನನ್ನೂ ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ ಮೆರಾರಿಯ ಕುಮಾರರ ಸಹೋದರರಲ್ಲಿ ಕೂಷಾಯನ ಮಗನಾದ ಎತಾನ ನನ್ನೂ ನೇಮಿಸಿದರು.

೧ ಪೂರ್ವಕಾಲವೃತ್ತಾಂತ 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी