೧ ಅರಸುಗಳು 8:20

ಈಗ ಕರ್ತನು ತಾನು ಹೇಳಿದ ವಾಕ್ಯ ವನ್ನು ಪೂರೈಸಿದ್ದಾನೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಎದ್ದು, ಕರ್ತನು ಮಾತು ಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಕರ್ತನ ನಾಮಕ್ಕೆ ಮಂದಿರವನ್ನು ಕಟ್ಟಿಸಿದ್ದೇನೆ.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 8

18ಆಗ ಕರ್ತನು ನನ್ನ ತಂದೆಯಾದ ದಾವೀದನಿಗೆ--ನನ್ನ ನಾಮಕ್ಕೆ ಮಂದಿರವನ್ನು ಕಟ್ಟಬೇಕೆಂದು ನಿನಗೆ ಮನಸ್ಸಾಗಿತ್ತಲ್ಲಾ, ನೀನು ಚೆನ್ನಾಗಿ ಮಾಡಿದಿ.

19ಆದಾಗ್ಯೂ ಮಂದಿರವನ್ನು ನೀನು ಕಟ್ಟಿಸಬೇಡ; ನಿನ್ನಿಂದ ಹುಟ್ಟುವ ಮಗನು, ಅವನೇ ನನ್ನ ಹೆಸರಿಗಾಗಿ ಮಂದಿರವನ್ನು ಕಟ್ಟಿಸುವನು ಅಂದನು.

20ಈಗ ಕರ್ತನು ತಾನು ಹೇಳಿದ ವಾಕ್ಯ ವನ್ನು ಪೂರೈಸಿದ್ದಾನೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಎದ್ದು, ಕರ್ತನು ಮಾತು ಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಕರ್ತನ ನಾಮಕ್ಕೆ ಮಂದಿರವನ್ನು ಕಟ್ಟಿಸಿದ್ದೇನೆ.

21ಇದಲ್ಲದೆ ಕರ್ತನು ನಮ್ಮ ಪಿತೃಗಳನ್ನು ಐಗುಪ್ತದೇಶದಿಂದ ಬರ ಮಾಡಿದಾಗ ಅವನ ಸಂಗಡ ಮಾಡಿದ ಒಡಂಬಡಿ ಕೆಯು ಇರುವ ಮಂಜೂಷಕ್ಕೋಸ್ಕರ ಸ್ಥಳವನ್ನು ಮಾಡಿಸಿ ದೆನು ಅಂದನು.

22ಆಗ ಸೊಲೊಮೋನನು ಇಸ್ರಾಯೇಲಿನ ಸಭೆ ಯವರ ಸಮ್ಮುಖದಲ್ಲಿ ದೇವರ ಬಲಿಪೀಠದ ಮುಂದೆ ನಿಂತು ಆಕಾಶದ ಕಡೆಗೆ ತನ್ನ ಕೈಗಳನ್ನು ಎತ್ತಿ ಹೇಳಿದ್ದೇ ನಂದರೆ--

೧ ಅರಸುಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी