ಫರೋಹನ ಮಗಳು ಅವಳಿಗೆ-ಹೋಗು ಅಂದಳು. ಆಗ ಆ ಹುಡುಗಿಯು ಹೋಗಿ ಕೂಸಿನ ತಾಯಿಯನ್ನು ಕರೆದಳು.
6ಆ ಪೆಟ್ಟಿಗೆಯನ್ನು ತೆರೆದು ಕೂಸನ್ನು ನೋಡಿದಳು; ಇಗೋ, ಕೂಸು ಅಳುತ್ತಿತ್ತು. ಆಗ ಆಕೆಯು ಅದರ ಮೇಲೆ ಅಂತಃಕರುಣೆಪಟ್ಟು--ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿದೆ ಅಂದಳು.
7ಆಗ ಅದರ ಅಕ್ಕ ಫರೋಹನ ಮಗಳಿಗೆ--ನಾನು ಹೋಗಿ ಈ ಕೂಸಿಗೆ ಮೊಲೆ ಕೊಡುವ ಹಾಗೆ ಇಬ್ರಿಯ ಸ್ತ್ರೀಯರಿಂದ ಒಬ್ಬ ದಾದಿ ಯನ್ನು ನಿನಗೋಸ್ಕರ ಕರಕೊಂಡು ಬರಲೋ ಅಂದಳು.
8ಫರೋಹನ ಮಗಳು ಅವಳಿಗೆ-ಹೋಗು ಅಂದಳು. ಆಗ ಆ ಹುಡುಗಿಯು ಹೋಗಿ ಕೂಸಿನ ತಾಯಿಯನ್ನು ಕರೆದಳು.
9ಫರೋಹನ ಮಗಳು ಆಕೆಗೆ--ಈ ಮಗು ವನ್ನು ತೆಗೆದುಕೊಂಡುಹೋಗಿ ನನಗೋಸ್ಕರ ಸಾಕು. ನಾನು ನಿನಗೆ ಸಂಬಳವನ್ನು ಕೊಡುವೆನು ಅಂದಳು. ಆಗ ಆ ಸ್ತ್ರೀಯು ಕೂಸನ್ನು ತಕ್ಕೊಂಡು ಹೋಗಿ ಸಾಕಿದಳು.
10ಈ ಮಗುವು ಬೆಳೆದಾಗ ಅವನನ್ನು ಫರೋಹನ ಮಗಳ ಬಳಿಗೆ ತಕ್ಕೊಂಡುಹೋದಳು. ಅವನು ಆಕೆಗೆ ಮಗನಾದನು. ಆಕೆಯು--ಇವನನ್ನು ನೀರಿನೊಳಗಿಂದ ಎಳೆದೆನೆಂದು ಹೇಳಿ ಅವನಿಗೆ ಮೋಶೆ ಎಂದು ಹೆಸರಿಟ್ಟಳು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ