ಧರ್ಮೋಪದೇಶಕಾಂಡ 2:22

ಕರ್ತನು ಸೇಯಾರಿನಲ್ಲಿ ವಾಸವಾಗಿ ರುವ ಏಸಾವನ ಮಕ್ಕಳಿಗೆ ಮಾಡಿದ ಹಾಗಾಯಿತು. ಅವನು ಅವರ ಮುಂದೆ ಹೋರಿಯರನ್ನು ನಾಶ ಮಾಡಿದಾಗ ಅವರು ಇವರನ್ನು ಹೊರಡಿಸಿ ಇವರ ಬದಲಾಗಿ ಇಂದಿನ ವರೆಗೂ ವಾಸಿಸಿದ್ದವರಲ್ಲಾ.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 2

20(ಇದು ಸಹ ರಾಕ್ಷಸರ ದೇಶವೆನಿಸಿಕೊಂಡಿತು; ಪೂರ್ವದಲ್ಲಿ ರಾಕ್ಷಸರು ಅದರಲ್ಲಿ ವಾಸಮಾಡಿದರು; ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು.

21ಅವರು ಅನಾಕ್ಯರ ಹಾಗೆ ದೊಡ್ಡವರೂ ಬಹಳವಾದ ವರೂ ಉದ್ದವಾದವರೂ ಆಗಿರುವ ಜನರು; ಆದರೆ ಕರ್ತನು ಅವರನ್ನು ಇವರ ಮುಂದೆ ನಾಶಮಾಡಿದ್ದರಿಂದ ಇವರು ಅವರನ್ನು ಹೊರಡಿಸಿ ಅವರ ಬದಲಾಗಿ ವಾಸಿಸಿದರು.

22ಕರ್ತನು ಸೇಯಾರಿನಲ್ಲಿ ವಾಸವಾಗಿ ರುವ ಏಸಾವನ ಮಕ್ಕಳಿಗೆ ಮಾಡಿದ ಹಾಗಾಯಿತು. ಅವನು ಅವರ ಮುಂದೆ ಹೋರಿಯರನ್ನು ನಾಶ ಮಾಡಿದಾಗ ಅವರು ಇವರನ್ನು ಹೊರಡಿಸಿ ಇವರ ಬದಲಾಗಿ ಇಂದಿನ ವರೆಗೂ ವಾಸಿಸಿದ್ದವರಲ್ಲಾ.

23ಹಾಗೆ ಹಚರೀಮಿನ ಅಜ್ಹದ ಪರ್ಯಂತರ ವಾಸ ವಾಗಿದ್ದ ಅವ್ವಿಯರನ್ನು ಕಫ್ತೋರಿಂದ ಹೊರಟ ಕಫ್ತೋರ್ಯರು ನಾಶಮಾಡಿ ಅವರ ಬದಲಾಗಿ ವಾಸಿಸಿದರು.)

24ಏಳಿರಿ, ಹೊರಡಿರಿ; ಅರ್ನೋನ್‌ ನದಿಯನ್ನು ದಾಟಿರಿ; ಇಗೋ, ಹೆಷ್ಬೋನಿನ ಅರಸ ನಾದ ಅಮೋರಿಯನಾದ ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಕೊಟ್ಟಿದ್ದೇನೆ, ಸ್ವಾಧೀನ ಪಡಿಸಿಕೊಳ್ಳುವದಕ್ಕೆ ಆರಂಭಮಾಡು. ಅವನ ಸಂಗಡ ಜಗಳವಾಡಿ ಯುದ್ಧಮಾಡು.

ಧರ್ಮೋಪದೇಶಕಾಂಡ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी