೨ ಪೂರ್ವಕಾಲವೃತ್ತಾಂತ 8:11

ಸೊಲೊಮೋನನು ಫರೋಹನ ಕುಮಾರ್ತೆ ಯನ್ನು ದಾವೀದನ ಪಟ್ಟಣದಿಂದ ತಾನು ಅವಳಿ ಗೋಸ್ಕರ ಕಟ್ಟಿಸಿದ ಮನೆಗೆ ಬರಮಾಡಿದನು. ಕರ್ತನ ಒಡಂಬಡಿಕೆಯ ಮಂಜೂಷವು ಬಂದ ಸ್ಥಳಗಳು ಪರಿಶುದ್ಧವಾಗಿರುವದರಿಂದ ನನ್ನ ಹೆಂಡತಿಯು ಇಸ್ರಾ ಯೇಲಿನ ಅರಸನಾದ ದಾವೀದನ ಮನೆಯಲ್ಲಿ ವಾಸ ವಾಗಿರಕೂಡದೆಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 8

9ಆದರೆ ಇಸ್ರಾಯೇಲ್ಯರನ್ನು ಸೊಲೊ ಮೋನನು ತನ್ನ ಕೆಲಸಕ್ಕೆ ದಾಸರಾಗಿ ಮಾಡಿಕೊಡ ಲಿಲ್ಲ. ಆದರೆ ಅವರು ಯುದ್ಧಸ್ಥರಾಗಿಯೂ ಅಧಿ ಪತಿಗಳಲ್ಲಿ ಪ್ರಧಾನರಾಗಿಯೂ ತನ್ನ ರಥಗಳ ಮೇಲೆಯೂ ರಾಹುತರ ಮೇಲೆಯೂ ಅಧಿಪತಿಗ ಳಾಗಿ ಇರುವಂತೆ ಮಾಡಿದನು.

10ಇವರು ಅರಸ ನಾದ ಸೊಲೊಮೋನನ ಅಧಿಪತಿಗಳಲ್ಲಿ ಪ್ರಧಾನ ರಾಗಿದ್ದರು. ಜನರನ್ನು ಆಳುವವರು ಇನ್ನೂರ ಐವತ್ತು ಮಂದಿ ಇದ್ದರು.

11ಸೊಲೊಮೋನನು ಫರೋಹನ ಕುಮಾರ್ತೆ ಯನ್ನು ದಾವೀದನ ಪಟ್ಟಣದಿಂದ ತಾನು ಅವಳಿ ಗೋಸ್ಕರ ಕಟ್ಟಿಸಿದ ಮನೆಗೆ ಬರಮಾಡಿದನು. ಕರ್ತನ ಒಡಂಬಡಿಕೆಯ ಮಂಜೂಷವು ಬಂದ ಸ್ಥಳಗಳು ಪರಿಶುದ್ಧವಾಗಿರುವದರಿಂದ ನನ್ನ ಹೆಂಡತಿಯು ಇಸ್ರಾ ಯೇಲಿನ ಅರಸನಾದ ದಾವೀದನ ಮನೆಯಲ್ಲಿ ವಾಸ ವಾಗಿರಕೂಡದೆಂದು ಹೇಳಿದನು.

12ಆಗ ಸೊಲೊಮೋನನು ದ್ವಾರಾಂಗಳದ ಮುಂದೆ ತಾನು ಕಟ್ಟಿಸಿದ ಕರ್ತನ ಬಲಿಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸಿದನು.

13ದಿನಂಪ್ರತಿಯಲ್ಲಿ ಮೋಶೆಯ ಆಜ್ಞೆ ಪ್ರಕಾರ ಸಬ್ಬ ತ್ತುಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ವರುಷದಲ್ಲಿ ಮೂರು ಸಾರಿ ಪವಿತ್ರ ಹಬ್ಬಗಳಾದ ಹುಳಿ ಇಲ್ಲದ ರೊಟ್ಟಿಯ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಪರ್ಣಶಾಲೆಗಳ ಹಬ್ಬದಲ್ಲಿಯೂ ಬಲಿಗಳನ್ನು ಅರ್ಪಿಸಿದನು.

೨ ಪೂರ್ವಕಾಲವೃತ್ತಾಂತ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी