ಆ ನೋಟಕ್ಕಾಗಿ ಬಂದಿದ್ದ ಎಲ್ಲಾ ಜನರು ನಡೆದ ಸಂಭವಗಳನ್ನು ನೋಡುತ್ತಾ ತಮ್ಮ ಎದೆಗಳನ್ನು ಬಡುಕೊಂಡು ಹಿಂದಿರುಗಿದರು.
46ಯೇಸು ಮಹಾಧ್ವನಿಯಿಂದ--ತಂದೆಯೇ, ನಾನು ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ ಎಂದು ಕೂಗಿ ಹೇಳಿದನು; ಹೀಗೆ ಹೇಳಿದ ಮೇಲೆ ಆತನು ಪ್ರಾಣಬಿಟ್ಟನು.
47ಆಗ ಶತಾಧಿ ಪತಿಯು ನಡೆದದ್ದನ್ನು ನೋಡಿ--ನಿಶ್ಚಯವಾಗಿ ಈತನು ನೀತಿವಂತನಾಗಿದ್ದನು ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.
48ಆ ನೋಟಕ್ಕಾಗಿ ಬಂದಿದ್ದ ಎಲ್ಲಾ ಜನರು ನಡೆದ ಸಂಭವಗಳನ್ನು ನೋಡುತ್ತಾ ತಮ್ಮ ಎದೆಗಳನ್ನು ಬಡುಕೊಂಡು ಹಿಂದಿರುಗಿದರು.
49ಆತನಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯ ದಿಂದ ಆತನನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.
50ಆಗ ಇಗೋ, ಅಲ್ಲಿ ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಆಲೋಚನಾ ಸಭೆಯವನೂ ಒಳ್ಳೆಯವನೂ ನೀತಿವಂತನೂ ಆಗಿ ದ್ದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ