ದಾನಿಯೇಲನು 6:9

ಆದಕಾರಣ ದಾರ್ಯಾವೆಷನು ಆ ಬರಹಕ್ಕೂ ನಿರ್ಣಯಕ್ಕೂ ರುಜು ಹಾಕಿದನು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 6

7ರಾಜ್ಯದ ಎಲ್ಲಾ ದೇಶಾಧಿಪತಿಗಳೂ ರಾಜ್ಯಪಾಲರೂ ನಾಯ ಕರೂ ಪ್ರಧಾನರೂ ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನಂದರೆ--ಓ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯರಿಗಾಗಲಿ ವಿಜ್ಞಾ ಪನೆ ಮಾಡಿದ್ದಾದರೆ ಅಂತವರು ಸಿಂಹದ ಗವಿಯಲ್ಲಿ ಹಾಕಲ್ಪಡುವರೆಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆ ಯನ್ನು ಕೊಡತಕ್ಕದ್ದು.

8ಓ ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ ಇದು ಬದಲಾಗದಂತೆ ಮೇದ್ಯಯರ ಮತ್ತು ಪಾರಸೀಯರ ನ್ಯಾಯಪ್ರಮಾಣದ ಪ್ರಕಾರ ಇದು ಬೇರೆಯಾಗದಂತೆ ನಿರ್ಣಯವನ್ನು ರೂಪಿಸಿ ಬರಹಕ್ಕೆ ರುಜುಹಾಕು ಅಂದರು.

9ಆದಕಾರಣ ದಾರ್ಯಾವೆಷನು ಆ ಬರಹಕ್ಕೂ ನಿರ್ಣಯಕ್ಕೂ ರುಜು ಹಾಕಿದನು.

10ಯಾವಾಗ ಬರಹಕ್ಕೆ ರುಜುಹಾಕಿದ್ದಾ ಯಿತ್ತೆಂದು ದಾನಿಯೇಲನಿಗೆ ತಿಳಿಯಿತೋ ಆಗ ಅವನು ತನ್ನ ಮನೆಗೆ ಹೋದನು; ಅವನ ಕೋಣೆಯಲ್ಲಿ ಕಿಟಕಿಗಳು ಯೆರೂಸಲೇಮಿಗೆ ಎದುರಾಗಿ ತೆರೆಯಲ್ಪಟ್ಟಿದ್ದ ರಿಂದ ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ಸ್ತೋತ್ರವನ್ನೂ ಸಲ್ಲಿಸಿ ದನು.

11ಆ ಮೇಲೆ ಆ ಮನುಷ್ಯರೆಲ್ಲಾ ಕೂಡಿ ಬಂದು ದಾನಿಯೇಲನು ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುತ್ತಿರುವ ದನ್ನು ಕಂಡರು.

ದಾನಿಯೇಲನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी