ಲೂಕನು 4:42

ಬೆಳಗಾದ ಮೇಲೆ ಆತನು ಅರಣ್ಯ ಸ್ಥಳಕ್ಕೆ ಹೊರಟು ಹೋದನು; ಜನರು ಆತನನ್ನು ಹುಡುಕಿಕೊಂಡು ಆತನ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗ ಬಾರದೆಂದು ಆತನನ್ನು ತಡೆದರು.

ಸಂದರ್ಭದೊಂದಿಗೆ ಓದಿ · ಲೂಕನು 4

40ಸೂರ್ಯಾಸ್ತಮಾನವಾಗುತ್ತಿದ್ದಾಗ ನಾನಾ ವಿಧ ವಾದ ರೋಗಗಳಿಂದ ಅಸ್ವಸ್ಥವಾದವರೆಲ್ಲರನ್ನು ಅವರು ಆತನ ಬಳಿಗೆ ತಂದರು; ಆತನು ಅವರಲ್ಲಿ ಪ್ರತಿಯೊಬ್ಬನ ಮೇಲೆ ತನ್ನ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದನು.

41ಅನೇಕರೊಳಗಿಂದ ದೆವ್ವಗಳು ಸಹ ಹೊರಗೆ ಬಂದು ಕೂಗುತ್ತಾ--ನೀನು ದೇವಕುಮಾರನಾದ ಕ್ರಿಸ್ತನೇ ಎಂದು ಹೇಳಿದವು. ಆತನು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದನು. ಯಾಕಂದರೆ ಆತನು ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು.

42ಬೆಳಗಾದ ಮೇಲೆ ಆತನು ಅರಣ್ಯ ಸ್ಥಳಕ್ಕೆ ಹೊರಟು ಹೋದನು; ಜನರು ಆತನನ್ನು ಹುಡುಕಿಕೊಂಡು ಆತನ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗ ಬಾರದೆಂದು ಆತನನ್ನು ತಡೆದರು.

43ಆದರೆ ಆತನು ಅವರಿಗೆ--ಬೇರೆ ಪಟ್ಟಣಗಳಿಗೂ ದೇವರ ರಾಜ್ಯವನ್ನು ನಾನು ಸಾರಲೇಬೇಕು; ಇದಕ್ಕಾಗಿಯೇ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.

44ಆತನು ಗಲಿಲಾಯದ ಸಭಾಮಂದಿರಗಳಲ್ಲಿ ಸಾರಿದನು.

ಲೂಕನು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी