ನೆಹೆಮಿಯ 5:15

ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು ನಾಲ್ವತ್ತು ಬೆಳ್ಳಿಯ ಶೇಕೆಲುಗಳ ಹೊರ ತಾಗಿ ಅವರಿಂದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಾ ಇದ್ದರು. ಅವರ ಸೇವಕರು ಸಹ ಜನರನ್ನು ಆಳುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹೀಗೆ ಮಾಡಿದವನಲ್ಲ.

ಸಂದರ್ಭದೊಂದಿಗೆ ಓದಿ · ನೆಹೆಮಿಯ 5

13ನಾನು ನನ್ನ ಬಟ್ಟೆಯನ್ನು ಝಾಡಿಸಿ -- ಈ ಮಾತಿನ ಪ್ರಕಾರ ಮಾಡದೆ ಇರುವ ಪ್ರತಿ ಮನುಷ್ಯನನ್ನು ದೇವರು ಅವನ ಮನೆಯಿಂದಲೂ ಅವನ ಕಷ್ಟಾರ್ಜಿತದಿಂದಲೂ ಝಾಡಿಸಲಿ. ಅವನು ಇದೇ ಪ್ರಕಾರ ಝಾಡಿಸಲ್ಪಟ್ಟು ಬರಿದಾಗಲಿ ಅಂದೆನು. ಅದಕ್ಕೆ ಸಭೆಯವರೆಲ್ಲರೂ--ಆಮೆನ್‌ ಎಂದು ಹೇಳಿ ಕರ್ತನನ್ನು ಸ್ತುತಿಸಿದರು. ನನ್ನ ದೇವರೇ, ಜನರು ಈ ಮಾತಿನ ಪ್ರಕಾರ ಮಾಡಿದರು.

14ಇದಲ್ಲದೆ ನಾನು ಯೆಹೂದ ದೇಶದಲ್ಲಿ ಅವರ ಅಧಿಪತಿಯಾಗಿದ್ದ ಕಾಲ ಮೊದಲುಗೊಂಡು ಅರಸ ನಾದ ಆರ್ತಷಸ್ತನ ಇಪ್ಪತ್ತನೇ ವರುಷ ಮೊದಲು ಗೊಂಡು ಮೂವತ್ತೆರಡನೇ ವರುಷದ ವರೆಗೆ ಹನ್ನೆರಡು ವರುಷವಾಗಿ ನಾನೂ ನನ್ನ ಸಹೋದರರೂ ಅಧಿ ಪತಿಯಾದವನ ರೊಟ್ಟಿಯನ್ನು ತಿನ್ನಲಿಲ್ಲ.

15ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು ನಾಲ್ವತ್ತು ಬೆಳ್ಳಿಯ ಶೇಕೆಲುಗಳ ಹೊರ ತಾಗಿ ಅವರಿಂದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಾ ಇದ್ದರು. ಅವರ ಸೇವಕರು ಸಹ ಜನರನ್ನು ಆಳುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹೀಗೆ ಮಾಡಿದವನಲ್ಲ.

16ಇದಲ್ಲದೆ ನಾನು ಈ ಗೋಡೆಯ ಕಾರ್ಯದಲ್ಲಿ ನೆಲೆಯಾಗಿದ್ದೆನು. ನಾವು ಭೂಮಿಯನ್ನು ಕೊಂಡುಕೊಳ್ಳಲಿಲ್ಲ. ನನ್ನ ಸೇವಕರೆಲ್ಲರು ಕೆಲಸಕ್ಕೆ ಕೂಡಿ ಬಂದರು.

17ನಮ್ಮ ಸುತ್ತಲೂ ಇರುವ ಜನಾಂಗಗಳಿಂದ ಬಂದವರ ಹೊರ ತು ಯೆಹೂದ್ಯರೂ ಅಧಿಕಾರಸ್ಥರೂ ನೂರ ಐವತ್ತು ಮಂದಿ ನನ್ನ ಮೇಜಿಗೆ ಸೇರುತ್ತಿದ್ದರು.

ನೆಹೆಮಿಯ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी