೨ ಪೇತ್ರನು 2:14

ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ.

ಸಂದರ್ಭದೊಂದಿಗೆ ಓದಿ · ೨ ಪೇತ್ರನು 2

12ಆದರೆ ಹಿಡಿಯಲ್ಪಟ್ಟು ನಾಶವಾಗುವದಕ್ಕೆ ಹುಟ್ಟಿರುವ ವಿವೇಕ ಶೂನ್ಯ ಮೃಗಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯ ವಾಗಿ ದೂಷಣೆ ಹೇಳುವವರಾಗಿದ್ದಾರೆ; ಇವರು ತಮ್ಮ ಕೆಟ್ಟತನದಿಂದ ಸಂಪೂರ್ಣ ನಾಶವಾಗುವವರಾಗಿ

13ತಮ್ಮ ದುರ್ನೀತಿಗೆ ಸರಿಯಾದ ದುಷ್ಪಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕ ರಾಗಿದ್ದು ಕಳಂಕಕ್ಕೂ ನಿಂದೆಗೂ ಕಾರಣರಾಗಿದ್ದಾರೆ.

14ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ.

15ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು.

16ಆದರೆ ಅವನ ದುಷ್ಟತ್ವಕ್ಕೆ ಖಂಡನೆಯಾಯಿತು; ಮೂಕ ಕತ್ತೆಯು ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು.

೨ ಪೇತ್ರನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी