೨ ಸಮುವೇಲನು 14:12

ಆಗ ಆ ಸ್ತ್ರೀಯು--ಅರಸನಾದ ನನ್ನ ಒಡೆಯನ ಸಂಗಡ ನಿನ್ನ ದಾಸಿಯು ಒಂದು ಮಾತನ್ನು ಹೇಳುವದಕ್ಕೆ ಅಪ್ಪಣೆ ಆಗಬೇಕು ಅಂದಳು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 14

10ಅದಕ್ಕೆ ಅರಸನು--ಯಾವನಾದರೂ ನಿನಗೆ ಏನಾದರೂ ಹೇಳಿದರೆ ಅವನನ್ನು ನನ್ನ ಬಳಿಗೆ ಕರ ಕೊಂಡು ಬಾ; ಅವನು ಇನ್ನು ನಿನ್ನನ್ನು ಎಂದಿಗೂ ಮುಟ್ಟದಂತೆ ಮಾಡುವೆನು ಅಂದನು.

11ಆಗ ಅವಳು--ರಕ್ತ ವಿಚಾರಕನು ಇನ್ನು ಸಂಹರಿಸದ ಹಾಗೆ ಅರಸನಾದ ನೀನು ನಿನ್ನ ದೇವರಾದ ಕರ್ತನನ್ನು ಜ್ಞಾಪಕಮಾಡು; ಅವರು ನನ್ನ ಮಗನನ್ನು ನಾಶಮಾಡ ಬಾರದು ಅಂದಳು. ಅದಕ್ಕವನು--ಕರ್ತನ ಜೀವ ದಾಣೆ, ನಿನ್ನ ಮಗನ ತಲೆಯ ಕೂದಲಲ್ಲಿ ಒಂದಾದರೂ ನೆಲದ ಮೇಲೆ ಬೀಳುವದಿಲ್ಲ ಅಂದನು.

12ಆಗ ಆ ಸ್ತ್ರೀಯು--ಅರಸನಾದ ನನ್ನ ಒಡೆಯನ ಸಂಗಡ ನಿನ್ನ ದಾಸಿಯು ಒಂದು ಮಾತನ್ನು ಹೇಳುವದಕ್ಕೆ ಅಪ್ಪಣೆ ಆಗಬೇಕು ಅಂದಳು.

13ಆಗ ಅವನು--ಹೇಳು ಅಂದನು. ಆಗ ಆ ಸ್ತ್ರೀಯು--ದೇವರ ಜನರಿಗೆ ವಿರೋಧವಾಗಿ ಅಂಥಾ ಕಾರ್ಯವನ್ನು ನೀನು ನೆನೆಸು ವದೇನು? ಅರಸನು ತಾನು ಹೊರಡಿಸಿದವನನ್ನು ತಿರಿಗಿ ಸೇರಿಸಿಕೊಳ್ಳದೆ ಹೋದದರಿಂದ ಇದನ್ನು ಅಪರಾಧಸ್ಥನ ಹಾಗೆಯೇ ಮಾತಾಡುತ್ತಿದ್ದಾನೆ.

14ನಾವು ಸಾಯುವದು ಅವಶ್ಯವೇ. ನೆಲದ ಮೇಲೆ ಚೆಲ್ಲಲ್ಪಟ್ಟು ತಿರಿಗಿ ಕೂಡಿಸಲ್ಪಡದ ನೀರಿನ ಹಾಗೆ ಇದ್ದೇವೆ. ಆದರೆ ದೇವರು ಯಾರನ್ನೂ ಲಕ್ಷ್ಯಮಾಡುವಾತನಲ್ಲ. ಆದರೂ ಹೊರಡಿಸಲ್ಪಟ್ಟವನು ಹೊರಡಿಸಲ್ಪಟ್ಟಿರದ ಹಾಗೆ ಆಲೋಚನೆಗಳನ್ನು ಮಾಡುವಾತನಾಗಿದ್ದಾನೆ.

೨ ಸಮುವೇಲನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी