ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾ ಡುತ್ತಾ ಇದ್ದವು.
12ಅವು ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು; ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಹೋದವು; ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ.
13ಅವುಗಳ ರೂಪವು ಜೀವಿಸುವ ಪ್ರಾಣಿಗಳ ಹಾಗಿದ್ದು ಅವುಗಳ ಆಕಾರವು ಉರಿಯುವ ಬೆಂಕಿಯ ಕೆಂಡ ಗಳಂತೆಯೂ ದೀಪಗಳ ಹಾಗೆಯೂ ಇದ್ದು ಅದು ಜೀವಿಗಳ ಮಧ್ಯದಲ್ಲಿ ಮೇಲೆಯೂ ಕೆಳಗೂ ಹೋಗು ತ್ತಿತ್ತು. ಆ ಬೆಂಕಿಯು ಪ್ರಕಾಶಮಾನವಾಗಿತ್ತು. ಆ ಬೆಂಕಿಯೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
14ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾ ಡುತ್ತಾ ಇದ್ದವು.
15ಆಗ ನಾನು ಆ ಜೀವಿಗಳನ್ನು ನೋಡಲಾಗಿ ಇಗೋ, ಜೀವಿಗಳಿಂದ ಭೂಮಿಯ ಮೇಲೆ ಒಂದು ಚಕ್ರವು ನಾಲ್ಕು ಮುಖಗಳುಳ್ಳದ್ದಾಗಿ ರುವದನ್ನು ನೋಡಿದೆನು.
16ಆ ಚಕ್ರಗಳ ಆಕಾರವೂ ಅವುಗಳ ಕೆಲಸವೂ ಪೀತರತ್ನ ವರ್ಣದ ಹಾಗಿದೆ. ಆ ನಾಲ್ಕಕ್ಕೆ ಒಂದೇ ರೂಪವಿದ್ದು ಅವುಗಳ ಆಕಾರವೂ ಅವುಗಳ ಕೆಲಸವೂ ಚಕ್ರದ ಮಧ್ಯದೊಳಗೆ ಚಕ್ರವು ಇದ್ದ ಹಾಗಿತ್ತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ