ಧರ್ಮೋಪದೇಶಕಾಂಡ 24:13

ಸೂರ್ಯನು ಮುಣುಗಿದಾಗ ಹೇಗಾದರೂ ಅವನಿಗೆ ಒತ್ತೆಯನ್ನು ಹಿಂದಕ್ಕೆ ಕೊಡಬೇಕು; ಆಗಲವನು ತನ್ನ ವಸ್ತ್ರದಲ್ಲಿ ಮಲಗಿಕೊಂಡು ನಿನ್ನನ್ನು ಆಶೀರ್ವದಿ ಸುವನು; ನಿನ್ನ ದೇವರಾದ ಕರ್ತನ ಮುಂದೆ ನೀತಿ ಉಂಟಾಗುವದು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 24

11ನೀನು ಹೊರಗೆ ನಿಂತಿರಬೇಕು; ನೀನು ಕೈಗಡ ಕೊಟ್ಟ ಮನುಷ್ಯನು ಒತ್ತೆಯನ್ನು ನಿನಗೆ ಹೊರಗೆ ತರಬೇಕು.

12ಅವನು ಬಡವನಾದರೆ, ಅವನ ಒತ್ತೆ ಇಟ್ಟುಕೊಂಡು ಮಲಗ ಬೇಡ.

13ಸೂರ್ಯನು ಮುಣುಗಿದಾಗ ಹೇಗಾದರೂ ಅವನಿಗೆ ಒತ್ತೆಯನ್ನು ಹಿಂದಕ್ಕೆ ಕೊಡಬೇಕು; ಆಗಲವನು ತನ್ನ ವಸ್ತ್ರದಲ್ಲಿ ಮಲಗಿಕೊಂಡು ನಿನ್ನನ್ನು ಆಶೀರ್ವದಿ ಸುವನು; ನಿನ್ನ ದೇವರಾದ ಕರ್ತನ ಮುಂದೆ ನೀತಿ ಉಂಟಾಗುವದು.

14ನಿನ್ನ ಸಹೋದರರಲ್ಲಿಯಾಗಲಿ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳಲ್ಲಿ ಇರುವ ಪರರಲ್ಲಿಯಾಗಲಿ ಕೊರತೆಯುಳ್ಳ ಬಡಕೂಲಿಯವನನ್ನು ಬಾಧಿಸಬಾರದು.

15ದಿನದಿನಕ್ಕೆ ಅವನ ಕೂಲಿ ಕೊಡಬೇಕು; ಸೂರ್ಯನು ಮುಣುಗುವದಕ್ಕಿಂತ ಮುಂಚೆ ಅದನ್ನು ಕೊಡಬೇಕು. ಅವನು ಬಡವನಾಗಿದ್ದು ಅದರ ಮೇಲೆಯೇ ತನ್ನ ಮನಸ್ಸು ಇಟ್ಟಿದ್ದಾನೆ; ಕೊಡದಿದ್ದರೆ ಅವನು ನಿನಗೆ ವಿರೋಧವಾಗಿ ಕರ್ತನ ಕಡೆಗೆ ಕೂಗುವನು; ಆಗ ನಿನ್ನ ಮೇಲೆ ಪಾಪವಿರುವದು.

ಧರ್ಮೋಪದೇಶಕಾಂಡ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी