ಯಾಜಕಕಾಂಡ 19:8

ಆದದರಿಂದ ಅದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು. ಕರ್ತನ ಪವಿತ್ರ ವಾದದ್ದನ್ನು ಅವನು ಅಶುದ್ಧಮಾಡಿದ್ದಾನೆ. ಅವನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಲ್ಪಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 19

6ಅದನ್ನು ನೀವು ಸಮರ್ಪಿಸಿದ ದಿನ ದಲ್ಲಿಯೂ ಮಾರನೆಯ ದಿನದಲ್ಲಿಯೂ ತಿನ್ನಬೇಕು; ಆದರೆ ಅದು ಮೂರನೆಯ ದಿನದ ವರೆಗೆ ಉಳಿದರೆ ಅದನ್ನು ಬೆಂಕಿಯಲ್ಲಿ ಸುಡಬೇಕು.

7ಆದರೆ ಅದನ್ನು ಮೂರನೆಯ ದಿನದಲ್ಲಿ ತಿಂದದ್ದೇ ಆದರೆ ಅದು ಅಸಹ್ಯವಾದದ್ದು; ಅದು ಅಂಗೀಕೃತವಾಗುವದಿಲ್ಲ.

8ಆದದರಿಂದ ಅದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು. ಕರ್ತನ ಪವಿತ್ರ ವಾದದ್ದನ್ನು ಅವನು ಅಶುದ್ಧಮಾಡಿದ್ದಾನೆ. ಅವನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಲ್ಪಡಬೇಕು.

9ನೀವು ನಿಮ್ಮ ಭೂಮಿಯ ಪೈರನ್ನು ಕೊಯ್ಯುವಾಗ ನಿಮ್ಮ ಹೊಲದ ಮೂಲೆಗಳಲ್ಲಿ ಸಂಪೂರ್ಣವಾಗಿ ಕೊಯ್ಯಬಾರದು ಇಲ್ಲವೆ ನಿಮ್ಮ ಸುಗ್ಗಿಯ ಹಕ್ಕಲುಗಳನ್ನು ಕೂಡಿಸಬಾರದು.

10ನಿಮ್ಮ ದ್ರಾಕ್ಷೇ ತೋಟದಲ್ಲಿ ಹಕ್ಕಲಾಯಬಾರದು ಇಲ್ಲವೆ ಪ್ರತಿಯೊಂದು ದ್ರಾಕ್ಷೆ ಯನ್ನೂ ಕೂಡಿಸಬಾರದು; ನೀವು ಅವುಗಳನ್ನು ಬಡವ ರಿಗಾಗಿಯೂ ಪರಕೀಯರಿಗಾಗಿಯೂ ಬಿಟ್ಟುಬಿಡ ಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.

ಯಾಜಕಕಾಂಡ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी