ಯೆಶಾಯ 18:3

ಭೂಲೋಕದ ನಿವಾಸಿಗಳೆಲ್ಲರೇ! ಭೂಮಿಯಲ್ಲಿ ವಾಸ ವಾಗಿರುವವರೆಲ್ಲರೇ! ಬೆಟ್ಟಗಳಲ್ಲಿ ಆತನು ಧ್ವಜವನ್ನು ಎತ್ತುವಾಗ ನೋಡಿರಿ; ಅವನು ತುತೂರಿಯನ್ನೂದು ವಾಗ ಕೇಳಿರಿ.

ಸಂದರ್ಭದೊಂದಿಗೆ ಓದಿ · ಯೆಶಾಯ 18

1ಓ ಐಥಿಯೋಪಿಯ ನದಿಗಳ ಆಚೆಯಲ್ಲಿರುವ ರೆಕ್ಕೆಗಳು ಪಟಪಟನೆ ಆಡುವ ನಾಡೇ, ಅಯ್ಯೋ!

2ಸಮುದ್ರ ಮಾರ್ಗದಿಂದಲೂ ಹಾ! ಆಪಿನ ದೋಣಿಗಳಲ್ಲಿ ನೀರಿನ ಮೇಲೆಯೂ ರಾಯಭಾರಿ ಗಳನ್ನು ಕಳುಹಿಸುವಂತಾದ್ದೇ! ಆಶ್ಚರ್ಯ ತೀವ್ರವಾದ ದೂತರೇ, ಚದುರಿಸಲ್ಪಟ್ಟಿರುವ ಮತ್ತು ಸೂರೆಯಾಗಿ ರುವ ಜನಾಂಗದವರ ಬಳಿಗೂ ಹುಟ್ಟಿದಂದಿನಿಂದ ಇಲ್ಲಿನ ವರೆಗೂ ಭಯಂಕರವಾದ ಜನರ ಬಳಿಗೂ ಮಹಾಬಲದಿಂದ ತುಳಿಯುವವರೂ ನದಿಗಳಿಂದ ವಿಂಗಡವಾಗಿರುವ ಜನಾಂಗದ ಬಳಿಗೂ ಹೋಗಿರಿ.

3ಭೂಲೋಕದ ನಿವಾಸಿಗಳೆಲ್ಲರೇ! ಭೂಮಿಯಲ್ಲಿ ವಾಸ ವಾಗಿರುವವರೆಲ್ಲರೇ! ಬೆಟ್ಟಗಳಲ್ಲಿ ಆತನು ಧ್ವಜವನ್ನು ಎತ್ತುವಾಗ ನೋಡಿರಿ; ಅವನು ತುತೂರಿಯನ್ನೂದು ವಾಗ ಕೇಳಿರಿ.

4ಕರ್ತನು ನನಗೆ--ನಾನು ವಿಶ್ರಾಂತಿ ಯನ್ನು ತೆಗೆದುಕೊಳ್ಳುವೆನು. ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು ಎಂದು ಹೇಳಿದನು.

5ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷೇ ಕಾಯಿಯಾಗುವಾಗ ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕು ವನು.

ಯೆಶಾಯ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी