೨ ಸಮುವೇಲನು 10:5

ಅವರು ಅದನ್ನು ದಾವೀದ ನಿಗೆ ತಿಳಿಸಿದಾಗ ಆ ಜನರು ಬಹಳ ನಾಚಿಕೆಪಟ್ಟದ್ದ ರಿಂದ ದಾವೀದನು ಕೆಲವರನ್ನು ಅವರಿಗೆದುರಾಗಿ ಕಳು ಹಿಸಿ--ನಿಮ್ಮ ಗಡ್ಡಗಳು ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿ ಕಾದಿದ್ದು ತರುವಾಯ ಬನ್ನಿರಿ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 10

3ದಾವೀದನ ಸೇವಕರು ಅಮ್ಮೋನನ ಮಕ್ಕಳ ದೇಶಕ್ಕೆ ಬಂದಾಗ ಅಮ್ಮೋನನ ಮಕ್ಕಳ ಪ್ರಧಾನರು ತಮ್ಮ ಯಜಮಾನನಾದ ಹಾನೂನ ನಿಗೆ--ದಾವೀದನು ಆದರಣೆ ಹೇಳುವವರನ್ನು ನಿನ್ನ ಬಳಿಗೆ ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನ ಪಡಿಸುತ್ತಾನೆಂದು ಯೋಚಿಸುತ್ತೀಯೋ? ಈ ಪಟ್ಟಣ ವನ್ನು ಶೋಧಿಸುವದಕ್ಕೂ ಪಾಳತಿನೋಡುವದಕ್ಕೂ ಅದನ್ನು ಕೆಡವಿಹಾಕುವದಕ್ಕೂ ದಾವೀದನು ತನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸಿದ್ದಲ್ಲವೋ ಅಂದರು.

4ಆದದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿದು ಅವರ ಅರ್ಧ ಗಡ್ಡವನ್ನು ಬೋಳಿಸಿ ಅವರ ವಸ್ತ್ರಗಳನ್ನು ಮಧ್ಯದಲ್ಲಿ ಕುಂಡಿಯ ವರೆಗೆ ಕತ್ತರಿಸಿ ಅವರನ್ನು ಕಳುಹಿಸಿದನು.

5ಅವರು ಅದನ್ನು ದಾವೀದ ನಿಗೆ ತಿಳಿಸಿದಾಗ ಆ ಜನರು ಬಹಳ ನಾಚಿಕೆಪಟ್ಟದ್ದ ರಿಂದ ದಾವೀದನು ಕೆಲವರನ್ನು ಅವರಿಗೆದುರಾಗಿ ಕಳು ಹಿಸಿ--ನಿಮ್ಮ ಗಡ್ಡಗಳು ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿ ಕಾದಿದ್ದು ತರುವಾಯ ಬನ್ನಿರಿ ಎಂದು ಹೇಳಿದನು.

6ಅಮ್ಮೋನನ ಮಕ್ಕಳು ತಾವು ದಾವೀದನಿಗೆ ಅಸಹ್ಯ ವಾದೆವೆಂದು ತಿಳುಕೊಂಡಾಗ ಅವರು (ದೂತರನ್ನು) ಕಳುಹಿಸಿ ಬೇತ್‌ರೆಹೋಬ್‌ನಲ್ಲಿಯೂ ಚೋಬಾದ ಲ್ಲಿಯೂ ಇರುವ ಇಪ್ತತ್ತು ಸಾವಿರ ಕಾಲಾಳುಗಳಾದ ಅರಾಮ್ಯರನ್ನೂ ಅರಸನಾದ ಮಾಕನ ಬಳಿಯಿಂದ ಸಾವಿರ ಜನರನ್ನೂ ಇಷ್ಟೋಬ್‌ನಿಂದ ಹನ್ನೆರಡು ಸಾವಿರ ಜನರನ್ನೂ ಕೂಲಿಗೆ ತೆಗೆದುಕೊಂಡರು.

7ದಾವೀದನು ಅದನ್ನು ಕೇಳಿದಾಗ ಅವನು ಯೋವಾಬನನ್ನೂ ಪರಾ ಕ್ರಮಶಾಲಿಗಳಾದ ಸಕಲ ಶೂರಸೈನಿಕರನ್ನು ಕಳುಹಿ ಸಿದನು.

೨ ಸಮುವೇಲನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी