ದಾನಿಯೇಲನು 8:10

ಅದು ಆಕಾಶ ಸೈನ್ಯದ ಎತ್ತರಕ್ಕೆ ಬೆಳೆದು ಆ ಸೈನ್ಯದಲ್ಲಿಯೂ ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ ಅವುಗಳನ್ನು ತುಳಿದುಹಾಕಿತು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 8

8ಆದದರಿಂದ ಆ ಹೋತವು ಬಹಳವಾಗಿ ಹೆಚ್ಚಿಕೊಂಡಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದ ಮೇಲೆ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಆಕಾಶದ ಚತುರ್ದಿಕ್ಕಿಗೆ ಚಾಚಿಕೊಂಡವು.

9ಅವುಗಳಲ್ಲಿ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ ಪೂರ್ವದ ಕಡೆಗೂ ರಮ್ಯ ದೇಶದ ಕಡೆಗೂ ಪ್ರಬಲವಾಯಿತು.

10ಅದು ಆಕಾಶ ಸೈನ್ಯದ ಎತ್ತರಕ್ಕೆ ಬೆಳೆದು ಆ ಸೈನ್ಯದಲ್ಲಿಯೂ ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ ಅವುಗಳನ್ನು ತುಳಿದುಹಾಕಿತು.

11ಹೌದು, ಸೈನ್ಯದ ಅಧಿಪತಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡು ನಿತ್ಯ ಯಜ್ಞವನ್ನು ಆತನಿಗೆ ಸಲ್ಲದಂತೆ ಮಾಡಿ ಆತನ ಪವಿತ್ರ ಸ್ಥಾನವನ್ನು ಕೆಡವಿಹಾಕಿತು;

12ಪ್ರತಿದಿನ ಯಜ್ಞದ ಸಂಗಡ ಸೈನ್ಯವೂ ಸಹ ಅಪ ರಾಧದ ನಿಮಿತ್ತವಾಗಿ ಅದಕ್ಕೆ ಕೊಡಲ್ಪಟ್ಟಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ ತನ್ನ ಇಷ್ಟಾರ್ಥವನ್ನು ಪೂರೈಸಿ ಕೊಂಡು ಅನುಕೂಲ ಪಡೆದು ವೃದ್ಧಿಗೆ ಬಂದಿತು.

ದಾನಿಯೇಲನು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी