ನ್ಯಾಯಸ್ಥಾಪಕರು 13:8

ಆಗ ಮಾನೋಹನು ಕರ್ತನಿಗೆ ಬೇಡಿಕೊಂಡು--ಓ ನನ್ನ ಕರ್ತನೇ, ನೀನು ಕಳುಹಿಸಿದ ದೇವರ ಮನು ಷ್ಯನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟುವ ಮಗುವಿಗೋಸ್ಕರ ನಾವು ಮಾಡಬೇಕಾದದ್ದನ್ನು ನಮಗೆ ಕಲಿಸಲಿ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 13

6ಆಗ ಆ ಸ್ತ್ರೀಯು ಬಂದು ತನ್ನ ಗಂಡನಿಗೆದೇವರ ಒಬ್ಬ ಮನುಷ್ಯನು ನನ್ನ ಬಳಿಗೆ ಬಂದನು. ಅವನ ರೂಪವು ದೇವದೂತನ ರೂಪದ ಹಾಗೆ ಮಹಾಭಯಂಕರವಾಗಿತ್ತು. ನಾನು ಅವನನ್ನು--ಎಲ್ಲಿಂದ ಬಂದಿ ಎಂದು ಕೇಳಲಿಲ್ಲ; ಅವನು ತನ್ನ ಹೆಸರನ್ನು ನನಗೆ ತಿಳಿಸಲಿಲ್ಲ.

7ಅವನು ನನಗೆಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವಿ, ಈಗ ನೀನು ದ್ರಾಕ್ಷಾರಸವನ್ನೂ ಮದ್ಯಪಾನ ವನ್ನೂ ಕುಡಿಯದೆ ಅಶುಚಿಯಾದ ಒಂದನ್ನಾದರೂ ತಿನ್ನದೆ ಇರು. ಯಾಕಂದರೆ ಆ ಹುಡುಗನು ಗರ್ಭದಿಂದ ತನ್ನ ಮರಣದ ಪರಿಯಂತರವೂ ದೇವರ ನಾಜೀರ ನಾಗಿರುವನು ಎಂದು ಹೇಳಿದನು ಅಂದಳು.

8ಆಗ ಮಾನೋಹನು ಕರ್ತನಿಗೆ ಬೇಡಿಕೊಂಡು--ಓ ನನ್ನ ಕರ್ತನೇ, ನೀನು ಕಳುಹಿಸಿದ ದೇವರ ಮನು ಷ್ಯನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟುವ ಮಗುವಿಗೋಸ್ಕರ ನಾವು ಮಾಡಬೇಕಾದದ್ದನ್ನು ನಮಗೆ ಕಲಿಸಲಿ ಎಂದು ಹೇಳಿದನು.

9ದೇವರು ಮಾನೋಹನ ಮೊರೆಯನ್ನು ಕೇಳಿದನು. ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ ದೇವರ ದೂತನು ತಿರಿಗಿ ಅವಳ ಬಳಿಗೆ ಬಂದನು. ಆದರೆ ಅವಳ ಗಂಡನಾದ ಮಾನೋಹನು ಅವಳ ಸಂಗಡ ಇರಲಿಲ್ಲ.

10ಆದದರಿಂದ ಅವಳು ಬೇಗ ಓಡಿಹೋಗಿ ತನ್ನ ಗಂಡನಿಗೆ--ಇಗೋ, ಆ ಹೊತ್ತು ನನ್ನ ಬಳಿಗೆ ಬಂದವನು ನನಗೆ ಪ್ರತ್ಯಕ್ಷನಾ ದನು ಎಂದು ತಿಳಿಸಿದಳು.

ನ್ಯಾಯಸ್ಥಾಪಕರು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी