ಅಪೊಸ್ತಲರ ಕೃತ್ಯಗಳು 22:9

ಆಗ ನನ್ನೊಂದಿಗಿದ್ದವರು ನಿಜವಾಗಿಯೂ ಆ ಬೆಳಕನ್ನು ನೋಡಿ ಭಯಪಟ್ಟರು; ಆದರೆ ನನ್ನೊಂದಿಗೆ ಮಾತನಾಡಿದ ಆತನ ಧ್ವನಿಯನ್ನು ಅವರು ಕೇಳಲಿಲ್ಲ.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 22

7ಆಗ ನಾನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತೀ? ಎಂದು ಹೇಳುವ ಧ್ವನಿಯನ್ನು ಕೇಳಿದೆನು.

8ಅದಕ್ಕೆ ನಾನು ಪ್ರತ್ಯುತ್ತರವಾಗಿ--ಕರ್ತನೇ, ನೀನು ಯಾರು ಎಂದು ಕೇಳಿದಾಗ ಆತನು--ನೀನು ಹಿಂಸಿಸುತ್ತಿರುವ ನಜರೇತಿನ ಯೇಸುವೇ ನಾನು ಎಂದು ನನಗೆ ಹೇಳಿದನು.

9ಆಗ ನನ್ನೊಂದಿಗಿದ್ದವರು ನಿಜವಾಗಿಯೂ ಆ ಬೆಳಕನ್ನು ನೋಡಿ ಭಯಪಟ್ಟರು; ಆದರೆ ನನ್ನೊಂದಿಗೆ ಮಾತನಾಡಿದ ಆತನ ಧ್ವನಿಯನ್ನು ಅವರು ಕೇಳಲಿಲ್ಲ.

10ನಾನು--ಕರ್ತನೇ, ನಾನೇನು ಮಾಡಬೇಕು ಎಂದು ಕೇಳಿದೆನು; ಅದಕ್ಕೆ ಕರ್ತನು ನನಗೆ--ನೀನೆದ್ದು ದಮಸ್ಕದೊಳಕ್ಕೆ ಹೋಗು; ನಿನಗೆ ನೇಮಿಸಲ್ಪ ಟ್ಟವುಗಳೆಲ್ಲವು ಅಲ್ಲಿ ನಿನಗೆ ತಿಳಿಸಲ್ಪಡುವವು ಎಂದು ಹೇಳಿದನು.

11ಆ ಬೆಳಕಿನ ಪ್ರಭಾವದ ನಿಮಿತ್ತವಾಗಿ ನನ್ನ ಕಣ್ಣು ಕಾಣಲಾರದೆ ಇದ್ದಾಗ ನನ್ನ ಜೊತೆಯಲ್ಲಿ ದ್ದವರು ನನ್ನ ಕೈ ಹಿಡಿದು ಕರಕೊಂಡು ಹೋದದ್ದರಿಂದ ನಾನು ದಮಸ್ಕಕ್ಕೆ ಬಂದೆನು.

ಅಪೊಸ್ತಲರ ಕೃತ್ಯಗಳು 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी