ಧರ್ಮೋಪದೇಶಕಾಂಡ 32:7

ಪೂರ್ವದ ದಿವಸಗಳನ್ನು ಜ್ಞಾಪಕಮಾಡಿಕೊ; ತಲ ತಲಾಂತರಗಳ ವರುಷಗಳನ್ನು ಗ್ರಹಿಸಿಕೊ; ನಿನ್ನ ತಂದೆ ಯನ್ನು ಕೇಳು, ಅವನು ನಿನಗೆ ತಿಳಿಸುವನು. ನಿನ್ನ ಹಿರಿಯರನ್ನು ಕೇಳು, ಅವರು ನಿನಗೆ ಹೇಳುವರು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 32

5ಅವರು ತಮ್ಮನ್ನು ತಾವೇ ಕೆಡಿಸಿಕೊಂಡರು. ಅವರ ಗುರುತು ಆತನ ಮಕ್ಕಳಲ್ಲದವರ ಗುರುತು. ಅವರು ಮೂರ್ಖರಾದ ವಕ್ರಸಂತತಿಯೇ.

6ಓ ಮೂರ್ಖರಾದ ಬುದ್ಧಿಹೀನ ಜನರೇ, ಕರ್ತನಿಗೆ ಹೀಗೆ ಪ್ರತಿಯಾಗಿ ಕೊಡುತ್ತೀರೋ? ಆತನು ನಿನ್ನನ್ನು ಕೊಂಡುಕೊಂಡ ತಂದೆಯಲ್ಲವೋ? ಆತನು ನಿನ್ನನ್ನು ಸೃಷ್ಟಿಮಾಡಿ ಸ್ಥಿರಪಡಿಸಿದ್ದಾನೆ.

7ಪೂರ್ವದ ದಿವಸಗಳನ್ನು ಜ್ಞಾಪಕಮಾಡಿಕೊ; ತಲ ತಲಾಂತರಗಳ ವರುಷಗಳನ್ನು ಗ್ರಹಿಸಿಕೊ; ನಿನ್ನ ತಂದೆ ಯನ್ನು ಕೇಳು, ಅವನು ನಿನಗೆ ತಿಳಿಸುವನು. ನಿನ್ನ ಹಿರಿಯರನ್ನು ಕೇಳು, ಅವರು ನಿನಗೆ ಹೇಳುವರು.

8ಮಹೋನ್ನತನು ಜನಾಂಗಗಳಿಗೆ ಸ್ವಾಸ್ತ್ಯ ಹಂಚಿ ಆತನು ಆದಾಮನ ಮಕ್ಕಳನ್ನು ವಿಂಗಡಿಸಿದಾಗ ಇಸ್ರಾ ಯೇಲ್‌ ಮಕ್ಕಳ ಲೆಕ್ಕದ ಪ್ರಕಾರ ಜನಗಳ ಮೇರೆಗಳನ್ನು ಇಟ್ಟನು.

9ಕರ್ತನ ಪಾಲು ಆತನ ಜನವೇ; ಯಾಕೋಬು ಆತನ ಸ್ವಾಸ್ತ್ಯದ ಪಾಲು.

ಧರ್ಮೋಪದೇಶಕಾಂಡ 32 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी