ನನ್ನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೊಲೆಯ ಮಂದೆಯನ್ನು ಮೇಯಿಸು.
2ತುರಾಯಿ ಗಿಡವೇ, ಗೋಳಿಡು; ದೇವದಾರು ಬಿದ್ದುಹೋಯಿತು, ಬಲವಾದವುಗಳು ಹಾಳಾದವು; ಬಾಷಾನಿನ ಓಕ್ ಮರಗಳೇ, ಗೋಳಾ ಡಿರಿ; ದ್ರಾಕ್ಷೆಯ ಅಡವಿಯು ಇಳಿದು ಬಂದಿದೆ.
3ಕುರುಬರು ಗೋಳಿಡುವ ಶಬ್ದವುಂಟು; ಅವರ ಗೌರವವು ಕೆಡಿಸಲ್ಪಟ್ಟಿದೆ, ಪ್ರಾಯದ ಸಿಂಹಗಳ ಘರ್ಜಿಸುವ ಶಬ್ದವುಂಟು; ಯೊರ್ದನಿನ ಗರ್ವ ಕೆಡಿಸಲ್ಪಟ್ಟಿದೆ.
4ನನ್ನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೊಲೆಯ ಮಂದೆಯನ್ನು ಮೇಯಿಸು.
5ಅವುಗಳನ್ನು ಸಂಪಾದಿಸಿದವರು ಅವುಗಳನ್ನು ಕೊಂದು ತಮ್ಮನ್ನು ನಿರಪರಾಧಿಗಳೆಂದೆಣಿಸುತ್ತಾರೆ; ಅವುಗಳನ್ನು ಮಾರುವ ವರು--ನಾನು ಐಶ್ವರ್ಯವಂತನಾದೆನು, ಕರ್ತನಿಗೆ ಸ್ತೋತ್ರ ಎಂದನ್ನುತ್ತಾರೆ; ಅವರ ಸ್ವಂತ ಕುರುಬರು ಅವುಗಳನ್ನು ಕನಿಕರಿಸುವದಿಲ್ಲ.
6ನಾನು ದೇಶದ ನಿವಾಸಿಗಳನ್ನು ಇನ್ನು ಕನಿಕರಿಸುವದೇ ಇಲ್ಲ ಎಂದು ಕರ್ತನು ಅನ್ನುತ್ತಾನೆ; ಆದರೆ ಇಗೋ, ನಾನು ಒಬ್ಬೊ ಬ್ಬನನ್ನು ತನ್ನ ತನ್ನ ನೆರೆಯವನ ಕೈಗೂ ತನ್ನ ಅರಸನ ಕೈಗೂ ಒಪ್ಪಿಸುವೆನು; ಅವರು ದೇಶವನ್ನು ಹೊಡೆ ಯುವರು; ಅವರ ಕೈಯೊಳಗಿಂದ ನಾನು ಅವರನ್ನು ತಪ್ಪಿಸುವದಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ