ಲೂಕನು 23:23

ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು.

ಸಂದರ್ಭದೊಂದಿಗೆ ಓದಿ · ಲೂಕನು 23

21ಆದರೆ ಅವರು--ಅವನನ್ನು ಶಿಲುಬೆಗೆ ಹಾಕಿಸು, ಅವನನ್ನು ಶಿಲುಬೆಗೆ ಹಾಕಿಸು ಎಂದು ಕೂಗುತ್ತಾ ಹೇಳಿದರು.

22ಆದರೆ ಅವನು ಮೂರನೆಯ ಸಾರಿ ಅವ ರಿಗೆ--ಯಾಕೆ? ಈತನು ಕೆಟ್ಟದ್ದೇನು ಮಾಡಿದ್ದಾನೆ? ಈತನಲ್ಲಿ ಮರಣಕ್ಕೆ ಕಾರಣವಾದದ್ದೇನೂ ನನಗೆ ಕಾಣ ಲಿಲ್ಲ; ಆದದರಿಂದ ನಾನು ಈತನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ ಅಂದನು.

23ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು.

24ಆಗ ಪಿಲಾತನು ಅವರು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿದನು.

25ಇದಲ್ಲದೆ ಅವರು ಇಷ್ಟಪಟ್ಟವ ನನ್ನು ಅಂದರೆ ದಂಗೆಯ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಲ್ಪಟ್ಟವನನ್ನು ಅವರಿಗೆ ಬಿಟ್ಟು ಕೊಟ್ಟು ಯೇಸುವನ್ನು ಅವರ ಇಷ್ಟಕ್ಕೆ ಒಪ್ಪಿಸಿದನು.

ಲೂಕನು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी