ಕೈಗಳೆಲ್ಲಾ ಜೋತಾಡುವವು; ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ನಿತ್ರಾಣವಾಗು ವವು.
15ಹೊರಗೆ ಕತ್ತಿಯೂ ಒಳಗೆ ವ್ಯಾಧಿಯೂ ಕ್ಷಾಮವೂ ಉಂಟು. ಹೊಲದಲ್ಲಿರುವವನನ್ನು ಕತ್ತಿಯು ಸಾಯಿಸುವದು; ಪಟ್ಟಣದಲ್ಲಿರುವವನನ್ನು ವ್ಯಾಧಿಯೂ ಬರವೂ ತಿಂದು ಬಿಡುವದು.
16ಆದರೆ ಅವರಲ್ಲಿ ತಪ್ಪಿಸಿಕೊಳ್ಳುವವರು ತಪ್ಪಿಸಿಕೊಳ್ಳುವರು; ಪ್ರತಿಯೊ ಬ್ಬರೂ ತಮ್ಮ ತಮ್ಮ ಅಕ್ರಮಗಳ ನಿಮಿತ್ತ ಗೋಳಾಡಿ ಕಣಿವೆಯಲ್ಲಿರುವ ಪಾರಿವಾಳದ ಹಾಗೆ ಪರ್ವತಗಳ ಮೇಲೆ ಇರುವರು.
17ಕೈಗಳೆಲ್ಲಾ ಜೋತಾಡುವವು; ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ನಿತ್ರಾಣವಾಗು ವವು.
18ಅವರು ತಮ್ಮಲ್ಲಿ ಗೋಣಿತಟ್ಟುಗಳನ್ನು ಕಟ್ಟಿ ಕೊಳ್ಳುವರು ಮತ್ತು ಭಯವು ಅವರನ್ನು ಮುಚ್ಚಿಬಿಡು ವದು; ಎಲ್ಲಾ ಮುಖಗಳ ಮೇಲೆ ನಾಚಿಕೆಯೂ ಅವರ ಎಲ್ಲಾ ತಲೆಗಳು ಬೋಳಾಗಿಯೂ ಇರುವವು.
19ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು; ಅವರ ಬಂಗಾರವು ತೆಗೆದುಹಾಕಲ್ಪಡುವದು, ಅವರ ಬೆಳ್ಳಿ ಬಂಗಾರಗಳು ಕರ್ತನ ಕೋಪದ ದಿವಸದಲ್ಲಿ ಅವರನ್ನು ತಪ್ಪಿಸಲಾರವು ಮತ್ತು ಅವರ ಪ್ರಾಣಗಳನ್ನು ತೃಪ್ತಿಪಡಿ ಸುವದಿಲ್ಲ. ಅವರ ಕರುಳುಗಳನ್ನು ತುಂಬಿಸುವದಿಲ್ಲ. ಯಾಕಂದರೆ ಅದು ಅವರ ಅಕ್ರಮಗಳ ಎಡತಡೆಯ ಭಾಗವಾಗಿದೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ