ಯೆಶಾಯ 3:6

ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿ ದು -- ನಿನಗೆ ವಸ್ತ್ರವಿದೆ, ನಮ್ಮನ್ನು ಆಳುವವನಾಗು ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ ಎಂದು ಹೇಳಲು

ಸಂದರ್ಭದೊಂದಿಗೆ ಓದಿ · ಯೆಶಾಯ 3

4ಮಕ್ಕಳನ್ನು ಅವರ ಪ್ರಭುಗಳನ್ನಾ ಗಿಯೂ ಎಳೇ ಕೂಸುಗಳು ಅವರ ಮೇಲೆ ಆಳು ವಂತೆಯೂ ಕೊಡುವೆನು.

5ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು.

6ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿ ದು -- ನಿನಗೆ ವಸ್ತ್ರವಿದೆ, ನಮ್ಮನ್ನು ಆಳುವವನಾಗು ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ ಎಂದು ಹೇಳಲು

7ಆ ದಿನದಲ್ಲಿ ಅವನು ಆಣೆಯಿಟ್ಟು --ನಾನು ಉಪಶಮನ ಮಾಡುವವನಾಗುವದಿಲ್ಲ, ನನ್ನ ಮನೆಯಲ್ಲಿ ಅನ್ನವಾಗಲಿ ವಸ್ತ್ರವಾಗಲಿ ಇಲ್ಲ; ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ ಅಂದನು.

8ಯೆರೂಸಲೇಮು ಹಾಳಾಗಿದೆ, ಯೆಹೂ ದವು ಬಿದ್ದುಹೋಗಿದೆ, ಆದದರಿಂದ ಅವರ ನಡೆನುಡಿ ಗಳು ಕರ್ತನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿ ಯನ್ನು ಕೆರಳಿಸುತ್ತವಲ್ಲವೇ.

ಯೆಶಾಯ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी