ಆದಿಕಾಂಡ 31:29

ನಿನಗೆ ಕೇಡುಮಾಡುವದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ--ನೀನು ಯಾಕೋಬನಿಗೆ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಹೇಳದ ಹಾಗೆ ಎಚ್ಚರಿಕೆಯಾಗಿರು ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 31

27ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಬಂದಿ? ನೀನು ನನಗೆ ಯಾಕೆ ತಿಳಿಸಲಿಲ್ಲ? ತಿಳಿಸಿದ್ದರೆ ಸಂತೋಷದಿಂದ ಹಾಡು ತಾಳ ವೀಣೆಗಳ ಸಂಗಡ ನಿನ್ನನ್ನು ಕಳುಹಿಸುತ್ತಿದ್ದೆನು.

28ಆದರೆ ನೀನು ನನ್ನ ಕುಮಾರರಿಗೂ ಕುಮಾರ್ತೆಯರಿಗೂ ಮುದ್ದು ಕೊಡ ಗೊಡಿಸಲಿಲ್ಲ. ನೀನು ಮಾಡಿದ್ದು ಹುಚ್ಚು ಕೆಲಸವೇ ಸರಿ.

29ನಿನಗೆ ಕೇಡುಮಾಡುವದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ--ನೀನು ಯಾಕೋಬನಿಗೆ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಹೇಳದ ಹಾಗೆ ಎಚ್ಚರಿಕೆಯಾಗಿರು ಎಂದು ಹೇಳಿದನು.

30ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಆಶಿಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ ಅಂದನು.

31ಅದಕ್ಕೆ ಯಾಕೋಬನು ಪ್ರತ್ಯುತ್ತರವಾಗಿ ಲಾಬಾನ ನಿಗೆ--ನೀನು ಒಂದು ವೇಳೆ ನಿನ್ನ ಕುಮಾರ್ತೆಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತಕ್ಕೊಳ್ಳುವಿ ಎಂದು ನಾನು ಅಂದುಕೊಂಡು ಭಯಪಟ್ಟೆನು.

ಆದಿಕಾಂಡ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी