ಯೆಹೆಜ್ಕೇಲನು 14:15

ನಾನು ದುಷ್ಟ ಮೃಗಗಳನ್ನು ದೇಶದಲ್ಲಿ ಹಾದು ಹೋಗುವಂತೆ ಮಾಡಿ ಅದನ್ನು ನಿರ್ಜನಪಡಿಸಿ, ಹಾಳು ಮಾಡಿ ಯಾರೂ ಮೃಗಗಳ ನಿಮಿತ್ತ ಹಾದು ಹೋಗದಂತೆ ಮಾಡಿದರೆ

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 14

13ಮನುಷ್ಯಪುತ್ರನೇ, ದೇಶವು ದೊಡ್ಡ ಅಪರಾಧದಿಂದ ನನಗೆ ವಿರುದ್ಧವಾಗಿ ಪಾಪಮಾಡಿದೆ, ನಾನು ಅದರ ಮೇಲೆ ನನ್ನ ಕೈಚಾಚಿ ಅದರ ಜೀವನಾಧಾ ರವನ್ನು ತೆಗೆದುಹಾಕಿ ಕ್ಷಾಮವು ಬರುವ ಹಾಗೆ ಮಾಡಿ ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದು ಬಿಡುವಾಗ,

14ನೋಹ ದಾನಿಯೇಲ ಯೋಬ ಎಂಬ ಈ ಮೂವರು ಅದರಲ್ಲಿದ್ದರೂ ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರು ಎಂದು ದೇವರಾದ ಕರ್ತನು ಹೇಳುತ್ತಾನೆ.

15ನಾನು ದುಷ್ಟ ಮೃಗಗಳನ್ನು ದೇಶದಲ್ಲಿ ಹಾದು ಹೋಗುವಂತೆ ಮಾಡಿ ಅದನ್ನು ನಿರ್ಜನಪಡಿಸಿ, ಹಾಳು ಮಾಡಿ ಯಾರೂ ಮೃಗಗಳ ನಿಮಿತ್ತ ಹಾದು ಹೋಗದಂತೆ ಮಾಡಿದರೆ

16ಈ ಮೂವರು ಮನುಷ್ಯರು ಅದರಲ್ಲಿ ಇದ್ದರೂ ನನ್ನ ಜೀವದಾಣೆ, ಅವರು ಕುಮಾರರ ನ್ನಾಗಲೀ ಕುಮಾರ್ತೆಯರನ್ನಾಗಲೀ ತಪ್ಪಿಸದೆ ತಾವು ಮಾತ್ರ ತಪ್ಪಿಸಿಕೊಳ್ಳುವರು; ಆದರೆ ದೇಶವು ಹಾಳಾಗುವದು ಎಂದು ದೇವರಾದ ಕರ್ತನು ಹೇಳುತ್ತಾನೆ.

17ಇಲ್ಲ ದಿದ್ದರೆ ನಾನು ಆ ದೇಶದ ಮೇಲೆ ಕತ್ತಿಯನ್ನು ತರಿಸಿ --ಕತ್ತಿಯೇ, ಆ ದೇಶದಲ್ಲಿ ಹಾದುಹೋಗು ಎಂದು ಹೇಳಿ, ಅದು ಮನುಷ್ಯರನ್ನೂ ಮೃಗಗಳನ್ನೂ ಅದರೊಳ ಗಿಂದ ಕಡಿದುಬಿಟ್ಟಾಗ

ಯೆಹೆಜ್ಕೇಲನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी