ಯೆಹೆಜ್ಕೇಲನು 38:11

ನೀನು ಪೌಳಿಗೋಡೆಯಿಲ್ಲದ ಹಳ್ಳಿಗಳುಳ್ಳ ದೇಶಕ್ಕೆ ನಾನು ಹೋಗುವೆನು; ಪೌಳಿ ಗೋಡೆಗಳಿಲ್ಲದೆ ಇಲ್ಲವೆ ಬಾಗಲುಗಳು ಅಗುಳಿಗಳು ಇಲ್ಲದೆ ಅದೂ ಅವರು ವಿಶ್ರಾಂತಿಯಿಂದಲೂ ಸುಖ ವಾಗಿ ವಾಸಿಸುತ್ತಿರುವಾಗ ನಾನು ಹೋಗಿ,

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 38

9ನೀನು ಮೇಲೇರಿ ಬಿರುಗಾಳಿಯಂತೆ ಬರುವಿ. ನೀನೂ ನಿನ್ನ ಎಲ್ಲಾ ದಂಡುಗಳೂ ಮತ್ತು ಅನೇಕ ಜನರ ಸಹಿತವಾಗಿ ಮೇಘದಂತೆ ದೇಶವನ್ನು ಮುಚ್ಚುವಿರಿ.

10ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇದೂ ಸಹ ಆಗುವದು, ಅದೇ ಸಮಯದಲ್ಲಿ ನಿನ್ನ ಮನಸ್ಸಿಗೆ ಕೆಲವು ಸಂಗತಿಗಳು ಬರುವವು ನೀನು ಒಂದು ಕೆಟ್ಟಯೋಚನೆಯನ್ನು ಯೋಚಿಸುವಿ,

11ನೀನು ಪೌಳಿಗೋಡೆಯಿಲ್ಲದ ಹಳ್ಳಿಗಳುಳ್ಳ ದೇಶಕ್ಕೆ ನಾನು ಹೋಗುವೆನು; ಪೌಳಿ ಗೋಡೆಗಳಿಲ್ಲದೆ ಇಲ್ಲವೆ ಬಾಗಲುಗಳು ಅಗುಳಿಗಳು ಇಲ್ಲದೆ ಅದೂ ಅವರು ವಿಶ್ರಾಂತಿಯಿಂದಲೂ ಸುಖ ವಾಗಿ ವಾಸಿಸುತ್ತಿರುವಾಗ ನಾನು ಹೋಗಿ,

12ಸುಲಿಗೆ ಯನ್ನು ಕೊಳ್ಳೆಯನ್ನು ತೆಗೆದುಕೊಳ್ಳುವೆನು; ಹೀಗೆ ನಿವಾಸಗಳಿದ್ದು ಬೀಡಾಗಿದ್ದ ಸ್ಥಳಗಳಲ್ಲಿಯೂ ಜನಾಂಗ ಗಳಿಂದ ಕೂಡಿಸಲ್ಪಟ್ಟಂತಹ ದನಗಳೂ ಸಂಪತ್ತೂ ಉಳ್ಳಂಥ ಮತ್ತು ಭೂಮಿಯ ಮಧ್ಯದಲ್ಲಿ ವಾಸಮಾಡು ವಂಥ ಜನರ ಮೇಲೆಯೂ ಕೈಹಾಕವೆನು ಎಂದು ಹೇಳುವಿ.

13ಶೇಬಾ, ದೇದಾನ್‌ ಮತ್ತು ತಾರ್ಷೀಷಿನ ವರ್ತಕರು, ಎಲ್ಲಾ ಪ್ರಾಯದ ಸಿಂಹಗಳೊಂದಿಗೆ ಅಲ್ಲಿ ನಿನಗೆ--ನೀನು ಸುಲಿಗೆ ತೆಗೆದುಕೊಳ್ಳಬೇಕೆಂದು ಬಂದಿಯಾ ಕೊಳ್ಳೆಹೊಡೆಯುವದಕ್ಕಾಗಿಯೇ ನಿನ್ನ ತಂಡ ವನ್ನು ಕೂಡಿಸಿದೆಯೋ? ಬಂಗಾರ ಮತ್ತು ಬೆಳ್ಳಿಯನ್ನು ಹೊತ್ತುಕೊಂಡು ದನಗಳನ್ನು ಸಂಪತ್ತನ್ನೂ ತೆಗೆದು ಕೊಂಡು ಮಹಾಸುಲಿಗೆ ತೆಗೆದುಕೊಳ್ಳಬೇಕೆಂದೋ ಅನ್ನುವರು.

ಯೆಹೆಜ್ಕೇಲನು 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी