ಯೆಹೆಜ್ಕೇಲನು 16:3

ದೇವರಾದ ಕರ್ತನು ಯೆರೂಸಲೇಮಿನವರಿಗೆ ಹೀಗೆ ಹೇಳುತ್ತಾನೆ--ನಿನ್ನ ಹುಟ್ಟುವಿಕೆಯೂ ನಿನ್ನ ಹುಟ್ಟಿದ ಸ್ಥಳವೂ ಕಾನಾನ್‌ ದೇಶದಿಂದಾದದ್ದೇ; ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 16

1ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ--

2ಮನುಷ್ಯಪುತ್ರನೇ, ಯೆರೂಸಲೇಮಿಗೆ ಅದರ ಅಸಹ್ಯವಾದವುಗಳನ್ನು ತಿಳಿದುಕೊಳ್ಳುವ ಹಾಗೆ ಮಾಡು.

3ದೇವರಾದ ಕರ್ತನು ಯೆರೂಸಲೇಮಿನವರಿಗೆ ಹೀಗೆ ಹೇಳುತ್ತಾನೆ--ನಿನ್ನ ಹುಟ್ಟುವಿಕೆಯೂ ನಿನ್ನ ಹುಟ್ಟಿದ ಸ್ಥಳವೂ ಕಾನಾನ್‌ ದೇಶದಿಂದಾದದ್ದೇ; ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು

4ನಿನ್ನ ಜನನವನ್ನು ಕುರಿತು ನೀನು ಹುಟ್ಟಿದ ದಿನದಲ್ಲಿ ನಿನ್ನ ಹೊಕ್ಕಳು ಕತ್ತರಿಸ ಲ್ಪಡಲಿಲ್ಲ; ಶುದ್ಧವಾಗುವ ಹಾಗೆ ನೀರಿನಿಂದ ತೊಳೆ ಯಲ್ಪಡಲಿಲ್ಲ, ನಿನಗೆ ಉಪ್ಪು ಹಾಕಲಿಲ್ಲ, ನಿನ್ನನ್ನು ಬಟ್ಟೆಯಿಂದ ಸುತ್ತಲಿಲ್ಲ.

5ನಿನ್ನನ್ನು ಕರುಣಿಸಿ ಕಟಾಕ್ಷಿಸಿ ಯಾರೂ ನಿನಗೆ ಇಂಥ ಒಂದು ಸಹಾಯವನ್ನು ಮಾಡ ಲಿಲ್ಲ, ಆದರೆ ನೀನು ಹುಟ್ಟಿದ ದಿನದಲ್ಲಿ ಅಸಹ್ಯಪಟ್ಟು ನಿನ್ನನ್ನು ಹೊಲದಲ್ಲಿ ಬಿಸಾಡಿದರು.

ಯೆಹೆಜ್ಕೇಲನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी