ಎಜ್ರನು 8:22

ಯಾಕಂದರೆ ಆತನನ್ನು ಹುಡುಕುವವರೆಲ್ಲರ ಮೇಲೆ ಒಳ್ಳೇದಾಗುವದಕ್ಕೆ ನಮ್ಮ ದೇವರ ಹಸ್ತ ಉಂಟು. ಆದರೆ ಆತನನ್ನು ಬಿಟ್ಟುಬಿಡುವವರ ಮೇಲೆ ಆತನ ಬಲವೂ ಆತನ ಕೋಪವೂ ಉಂಟು ಎಂದು ನಾವು ಅರಸನಿಗೆ ಹೇಳಿದ್ದರಿಂದ ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಕಾಲ್ಬಲ ವನ್ನೂ ರಾಹುತರನ್ನೂ ಅರಸನಿಂದ ಕೇಳಲು ನಾಚಿಕೆ ಪಟ್ಟೆವು.

ಸಂದರ್ಭದೊಂದಿಗೆ ಓದಿ · ಎಜ್ರನು 8

20ದಾವೀ ದನೂ ಪ್ರಧಾನರೂ ಲೇವಿಯರನ್ನು ಸೇವಿಸುವದಕ್ಕೆ ನೇಮಿಸಿದ ನೆತಿನಿಯರಲ್ಲಿ ಇನ್ನೂರ ಇಪ್ಪತ್ತು ಮಂದಿ ನೆತಿನಿಯರನ್ನೂ ನಮ್ಮ ಬಳಿಗೆ ಕರಕೊಂಡು ಬಂದರು. ಅವರೆಲ್ಲರೂ ಹೆಸರು ಹೆಸರಾಗಿ ಬರೆಯಲ್ಪಟ್ಟಿದ್ದರು.

21ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸುಕೊಳ್ಳುವದಕ್ಕೂ ನಮಗೂ ನಮ್ಮ ಮಕ್ಕಳಿಗೂ ನಮ್ಮ ಎಲ್ಲಾ ಸ್ಥಿತಿಗೂ ಆತನಿಂದ ಸರಿಯಾದ ಮಾರ್ಗ ವನ್ನು ಹುಡುಕುವದಕ್ಕೂ ನಾನು ಅಲ್ಲಿ ಅಹವಾ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಸಾರಿದೆನು.

22ಯಾಕಂದರೆ ಆತನನ್ನು ಹುಡುಕುವವರೆಲ್ಲರ ಮೇಲೆ ಒಳ್ಳೇದಾಗುವದಕ್ಕೆ ನಮ್ಮ ದೇವರ ಹಸ್ತ ಉಂಟು. ಆದರೆ ಆತನನ್ನು ಬಿಟ್ಟುಬಿಡುವವರ ಮೇಲೆ ಆತನ ಬಲವೂ ಆತನ ಕೋಪವೂ ಉಂಟು ಎಂದು ನಾವು ಅರಸನಿಗೆ ಹೇಳಿದ್ದರಿಂದ ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಕಾಲ್ಬಲ ವನ್ನೂ ರಾಹುತರನ್ನೂ ಅರಸನಿಂದ ಕೇಳಲು ನಾಚಿಕೆ ಪಟ್ಟೆವು.

23ಆದದರಿಂದ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.

24ನಾನು ಯಾಜಕರ ಪ್ರಮುಖರಲ್ಲಿ ಹನ್ನೆರಡು ಮಂದಿಯಾಗಿರುವ ಶೆರೆಬ್ಯನನ್ನೂ ಹಷಬ್ಯನನ್ನೂ ಅವರ ಸಂಗಡ ಅವರ ಸಹೋದರರಲ್ಲಿ ಹತ್ತು ಮಂದಿಯನ್ನೂ ಪ್ರತ್ಯೇಕಿಸಿ

ಎಜ್ರನು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी