ಓ ಕರ್ತನೇ, ಕೇಳು; ನನ್ನ ಮೇಲೆ ಕರುಣೆಯಿಡು. ಕರ್ತನೇ, ನನಗೆ ಸಹಾಯಕನಾಗಿರು.
8ಓ ಕರ್ತನೇ, ನಾನು ನಿನಗೆ ಕೂಗಿಕೊಂಡೆನು; ಕರ್ತ ನಿಗೆ ವಿಜ್ಞಾಪನೆ ಮಾಡಿದೆನು.
9ನಾನು ಕುಣಿಯಲ್ಲಿಳಿ ದರೆ ನನ್ನ ರಕ್ತದಲ್ಲಿ ಲಾಭವೇನು? ಧೂಳು ನಿನ್ನನ್ನು ಕೊಂಡಾಡುವದೋ? ಅದು ನಿನ್ನ ಸತ್ಯವನ್ನು ತಿಳಿಸು ವದೋ?
10ಓ ಕರ್ತನೇ, ಕೇಳು; ನನ್ನ ಮೇಲೆ ಕರುಣೆಯಿಡು. ಕರ್ತನೇ, ನನಗೆ ಸಹಾಯಕನಾಗಿರು.
11ನೀನು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರು ಗಿಸಿದ್ದೀ; ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಸಂತೋಷ ದಿಂದ ನನ್ನ ನಡುವನ್ನು ಕಟ್ಟಿದ್ದೀ.
12ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಓ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ