ಓ ಕರ್ತನೇ, ನಿನ್ನ ನಿಯಮಗಳ ಮಾರ್ಗವನ್ನು ನನಗೆ ಬೋಧಿಸು; ಅದನ್ನು ಕಡೇ ವರೆಗೂ ಕೈ ಕೊಳ್ಳುವೆನು.
31ನಿನ್ನ ಸಾಕ್ಷಿಗಳಿಗೆ ಹತ್ತಿಕೊಂಡಿದ್ದೇನೆ; ಓ ಕರ್ತನೇ, ನನ್ನನ್ನು ನಾಚಿಕೆಪಡಿಸಬೇಡ.
32ನಿನ್ನ ಆಜ್ಞೆಗಳ ಮಾರ್ಗದಲ್ಲಿ ಓಡುವೆನು; ನೀನು ನನ್ನ ಹೃದಯವನ್ನು ವಿಶಾಲಮಾಡುತ್ತೀ.
33ಓ ಕರ್ತನೇ, ನಿನ್ನ ನಿಯಮಗಳ ಮಾರ್ಗವನ್ನು ನನಗೆ ಬೋಧಿಸು; ಅದನ್ನು ಕಡೇ ವರೆಗೂ ಕೈ ಕೊಳ್ಳುವೆನು.
34ನನಗೆ ಗ್ರಹಿಕೆಯನ್ನು ಕೊಡು; ಆಗ ನಿನ್ನ ನ್ಯಾಯಪ್ರಮಾಣವನ್ನು ಕೈಕೊಂಡು ಹೌದು, ಪೂರ್ಣಹೃದಯದಿಂದ ಅದನ್ನು ಕೈಕೊಳ್ಳುವೆನು.
35ನಿನ್ನ ಆಜ್ಞೆಗಳ ದಾರಿಯಲ್ಲಿ ನನ್ನನ್ನು ನಡೆಯಮಾಡು; ಅದ ರಲ್ಲಿ ಸಂತೋಷಿಸುತ್ತೇನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ