ಯಾಕಂದರೆ ತಾನು ಎಲ್ಲಾ ವಿರೋಧಿ ಗಳನ್ನು ತನ್ನ ಪಾದಗಳ ಕೆಳಗೆ ಹಾಕುವ ತನಕ ಆತನು ಆಳುವದು ಅವಶ್ಯ.
23ಆದರೆ ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿ ಇರುವನು; ಕ್ರಿಸ್ತನು ಪ್ರಥಮ ಫಲ, ತರುವಾಯ ಕ್ರಿಸ್ತನ ಬರೋಣದಲ್ಲಿ ಆತನವರು.
24ಆಮೇಲೆ ಆತನು ಬೇರೆ ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿ ಕೊಡುವಾಗ ಸಮಾಪ್ತಿ ಯಾಗುವದು.
25ಯಾಕಂದರೆ ತಾನು ಎಲ್ಲಾ ವಿರೋಧಿ ಗಳನ್ನು ತನ್ನ ಪಾದಗಳ ಕೆಳಗೆ ಹಾಕುವ ತನಕ ಆತನು ಆಳುವದು ಅವಶ್ಯ.
26ನಾಶವಾಗಲಿರುವ ಕಡೇ ಶತ್ರುವು ಮರಣ.
27ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿದ್ದಾನೆ. ಸಮಸ್ತವೂ ಆತನಿಗೆ ಅಧೀನ ಮಾಡಲ್ಪಟ್ಟಿದೆ ಎಂದು ಹೇಳುವಾಗ ಸಮಸ್ತವನ್ನು ಅಧೀನ ಮಾಡಿದಾತನು ಅದರಲ್ಲಿ ಸೇರಲಿಲ್ಲವೆಂಬದು ಸ್ಪಷ್ಟವಾಗಿದೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ