ಯೆಹೆಜ್ಕೇಲನು 40:46

ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಯಜ್ಞವೇದಿಯ ಮೇಲ್ವಿಚಾರಕರಾದ ಯಾಜಕ ರದು. ಚಾದೋಕನ ಕುಮಾರರಾದ ಇವರು ಲೇವಿಯ ಕುಮಾರ ರಲ್ಲಿ ಕರ್ತನ ಸನ್ನಿಧಿಯ ಸೇವಕರಾಗಿದ್ದಾರೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 40

44ಒಳಗಿನ ಬಾಗಲಿನ ಹೊರಗೆ ಒಳಗಿನ ಅಂಗಳದಲ್ಲಿ ಹಾಡುವವರ ಕೊಠಡಿಗಳು ಇದ್ದವು; ಒಂದು ಉತ್ತರದ ಬಾಗಲಿನ ಕಡೆಗೆ ದಕ್ಷಿಣಕ್ಕೆ ಅಭಿಮುಖವಾಗಿತ್ತು; ಮತ್ತೊಂದು ಪೂರ್ವದ ಬಾಗಲಿನ ಕಡೆಗೆ ಉತ್ತರಕ್ಕೆ ಅಭಿಮುಖ ವಾಗಿತ್ತು.

45ಅವನು ನನಗೆ ಹೇಳಿದ್ದೇ ನಂದರೆ--ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು.

46ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಯಜ್ಞವೇದಿಯ ಮೇಲ್ವಿಚಾರಕರಾದ ಯಾಜಕ ರದು. ಚಾದೋಕನ ಕುಮಾರರಾದ ಇವರು ಲೇವಿಯ ಕುಮಾರ ರಲ್ಲಿ ಕರ್ತನ ಸನ್ನಿಧಿಯ ಸೇವಕರಾಗಿದ್ದಾರೆ.

47ಹೀಗೆ ಅವನು ಅಂಗಳವನ್ನು ಅಳೆದನು, ಅದರ ಉದ್ದ ನೂರು ಮೊಳ, ಅಗಲ ನೂರು ಮೊಳ, ಅದು ಚಚ್ಚೌಕವಾಗಿತ್ತು; ಆ ಯಜ್ಞವೇದಿಯು ಮನೆಯ ಮುಂದೆ ಇತ್ತು.

48ಅವನು ನನ್ನನ್ನು ಮನೆಯ ದ್ವಾರಾಂಗಣಕ್ಕೆ ಕರೆದು ಕೊಂಡು ಹೋಗಿ ದ್ವಾರಾಂಗಣದ ಪ್ರತಿಯೊಂದು ಕಂಬವನ್ನು ಅಳೆದನು; ಆ ಕಡೆ ಈ ಕಡೆ ಐದುಮೊಳ ಮತ್ತು ಬಾಗಲಿನ ಅಗಲ ಆ ಕಡೆ ಮೂರುಮೊಳ, ಈ ಕಡೆ ಮೂರುಮೊಳ ಇತ್ತು.

ಯೆಹೆಜ್ಕೇಲನು 40 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी