ನೀನು ಬೆಳಿಗ್ಗೆ ಸಿದ್ಧನಾಗಿದ್ದು ಸೀನಾಯಿ ಬೆಟ್ಟವನ್ನೇರಿ ಅದರ ಮೇಲೆ ಅಲ್ಲಿ ನನಗಾಗಿ ನೀನು ಹಾಜರಾಗಿರು.
1ಕರ್ತನು ಮೋಶೆಗೆ--ಮೊದಲಿನವುಗಳಂತಿರುವ ಕಲ್ಲಿನ ಎರಡು ಹಲಗೆಗಳನ್ನು ಕೆತ್ತಿಸಿಕೋ. ಆಗ ನೀನು ಒಡೆದ ಆ ಮೊದಲನೆಯ ಹಲಗೆಗಳ ಮೇಲೆ ಇದ್ದ ವಾಕ್ಯಗಳನ್ನು ಈ ಹಲಗೆಗಳ ಮೇಲೆ ನಾನು ಬರೆಯುವೆನು.
2ನೀನು ಬೆಳಿಗ್ಗೆ ಸಿದ್ಧನಾಗಿದ್ದು ಸೀನಾಯಿ ಬೆಟ್ಟವನ್ನೇರಿ ಅದರ ಮೇಲೆ ಅಲ್ಲಿ ನನಗಾಗಿ ನೀನು ಹಾಜರಾಗಿರು.
3ಆದರೆ ಯಾರೂ ನಿನ್ನ ಸಂಗಡ ಮೇಲಕ್ಕೆ ಬರಬಾರದು, ಇಲ್ಲವೆ ಬೆಟ್ಟದ ಮೇಲೆ ಎಲ್ಲಿಯೂ ಯಾರೂ ಕಾಣಿಸಬಾರದು, ಇಲ್ಲವೆ ಆ ಬೆಟ್ಟದ ಎದುರಿನಲ್ಲಿ ಕುರಿ ದನಗಳು ಸಹ ಮೇಯ ಬಾರದು.
4ಆಗ ಮೋಶೆಯು ಮೊದಲಿನವುಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿ ಕೊಂಡನು. ಕರ್ತನು ತನಗೆ ಆಜ್ಞಾಪಿಸಿದಂತೆ ಅವನು ಬೆಳಿಗ್ಗೆ ಎದ್ದು ಎರಡು ಕಲ್ಲಿನ ಹಲಗೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟದ ಮೇಲಕ್ಕೆ ಹೋದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ