೧ ಸಮುವೇಲನು 25:19

ತನ್ನ ಸೇವಕರಿಗೆ--ನನಗೆ ಮುಂದಾಗಿ ಹೋಗಿರಿ; ಇಗೋ, ನಾನು ನಿಮ್ಮ ಹಿಂದೆ ಬರುವೆನೆಂದು ಹೇಳಿದಳು; ಆದರೆ ತನ್ನ ಗಂಡನಾದ ನಾಬಾಲನಿಗೆ ತಿಳಿಸಲಿಲ್ಲ.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 25

17ಈಗ ನೀನು ಅದಕ್ಕೆ ಮಾಡಬೇಕಾ ದದ್ದೇನೆಂದು ತಿಳುಕೊಂಡು ನೋಡು. ಯಾಕಂದರೆ ಕೇಡು ನಮ್ಮ ಯಜಮಾನನ ಮೇಲೆಯೂ ಅವನ ಮನೆಯೆಲ್ಲಾದರ ಮೇಲೆಯೂ ನಿಶ್ಚಯಿಸಲ್ಪಟ್ಟಿದೆ; ಏನಂದರೆ, ಅವನು ಬೆಲಿಯಾಳನ ಮಗನಾಗಿರುವದ ರಿಂದ ಅವನ ಸಂಗಡ ಯಾವನೂ ಮಾತನಾಡ ಕೂಡದು ಅಂದನು.

18ಆಗ ಅಬೀಗೈಲಳು ಶೀಘ್ರವಾಗಿ ಇನ್ನೂರು ರೊಟ್ಟಿಗಳನ್ನೂ ಎರಡು ಬುದ್ದಲಿ ದ್ರಾಕ್ಷಾರಸ ವನ್ನೂ ಸಿದ್ಧಪಡಿಸಿದ ಐದು ಕುರಿಗಳ ಮಾಂಸವನ್ನೂ ಐದು ಸೇರು ಹುರಿದ ಕಾಳುಗಳನ್ನೂ ಒಣಗಿದ ನೂರು ದ್ರಾಕ್ಷೇ ಗೊಂಚಲುಗಳನ್ನೂ ಒಣಗಿದ ಇನ್ನೂರು ಅಂಜೂರದ ಉಂಡೆಗಳನ್ನೂ ತೆಗೆದು ಕತ್ತೆಗಳ ಮೇಲೆ ಹೇರಿಸಿಕೊಂಡು

19ತನ್ನ ಸೇವಕರಿಗೆ--ನನಗೆ ಮುಂದಾಗಿ ಹೋಗಿರಿ; ಇಗೋ, ನಾನು ನಿಮ್ಮ ಹಿಂದೆ ಬರುವೆನೆಂದು ಹೇಳಿದಳು; ಆದರೆ ತನ್ನ ಗಂಡನಾದ ನಾಬಾಲನಿಗೆ ತಿಳಿಸಲಿಲ್ಲ.

20ಅವಳು ಒಂದು ಕತ್ತೆಯ ಮೇಲೆ ಹತ್ತಿಕೊಂಡು ಗುಡ್ಡದ ಮರೆಗೆ ಬಂದಾಗ ಇಗೋ, ದಾವೀದನೂ ಅವನ ಮನುಷ್ಯರೂ ಅವಳಿಗೆ ಎದುರಾಗಿ ಇಳಿದು ಬಂದರು. ಅವಳು ಅವರನ್ನು ಎದುರುಗೊಂಡಳು.

21ಆದರೆ ದಾವೀದನು--ಅಡವಿ ಯಲ್ಲಿದ್ದ ಇವನ ಎಲ್ಲಾದರಲ್ಲಿ ಒಂದಾದರೂ ಕಳಕೊಳ್ಳದ ಹಾಗೆ ನಾನು ಕಾಪಾಡಿದ್ದು ವ್ಯರ್ಥವಾಯಿತು. ಆದರೆ ನಾನು ಮಾಡಿದ ಉಪಕಾರಕ್ಕೆ ಬದಲಾಗಿ ಈಗ ಅವನು ನನಗೆ ಅಪಕಾರ ಮಾಡಿದ್ದಾನೆ.

೧ ಸಮುವೇಲನು 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी