ಆಕೆಯು ಗರ್ಭಿಣಿಯಾಗಿದ್ದು ಪ್ರಸವವೇದನೆಯಿಂದ ಹೆರುವದಕ್ಕೆ ಸಂಕಟಪಡುತ್ತಾ ಕೂಗುತ್ತಿದ್ದಳು.
1ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು; ಅಲ್ಲಿ ಸೂರ್ಯನನ್ನು ಧರಿಸಿ ಕೊಂಡಿದ್ದ ಒಬ್ಬ ಸ್ತ್ರೀಯಿದ್ದಳು; ಆಕೆಯ ಕಾಲುಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು.
2ಆಕೆಯು ಗರ್ಭಿಣಿಯಾಗಿದ್ದು ಪ್ರಸವವೇದನೆಯಿಂದ ಹೆರುವದಕ್ಕೆ ಸಂಕಟಪಡುತ್ತಾ ಕೂಗುತ್ತಿದ್ದಳು.
3ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು; ಆಗ ಇಗೋ, ಕೆಂಪಾದ ಮಹಾ ಘಟಸರ್ಪವಿತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು; ಅದರ ತಲೆಗಳ ಮೇಲೆ ಏಳು ಕಿರೀಟಗಳಿದ್ದವು.
4ಅದರ ಬಾಲವು ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರ ಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಹಾಕಿತು. ಹೆರುವದಕ್ಕೆ ಸಿದ್ಧವಾಗಿದ್ದ ಆ ಸ್ತ್ರೀಯು ಹೆತ್ತಕೂಡಲೆ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟ ಸರ್ಪವು ಅವಳ ಮುಂದೆ ನಿಂತುಕೊಂಡಿತ್ತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ