ಗುಂಡಿಯೊಳಕ್ಕೆ ಹೋಗುವವರನ್ನು ನುಂಗುವಂತೆ ಸಂಪೂರ್ಣವಾಗಿ ನಾವು ಅವರನ್ನು ಸಮಾಧಿಯಂತೆ ನುಂಗಿಬಿಡೋಣ.
10ನನ್ನ ಮಗನೇ, ಪಾಪಿ ಗಳು ನಿನ್ನನ್ನು ಆಕರ್ಷಿಸಿದರೆ ನೀನು ಒಪ್ಪಬೇಡ.
11ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ.
12ಗುಂಡಿಯೊಳಕ್ಕೆ ಹೋಗುವವರನ್ನು ನುಂಗುವಂತೆ ಸಂಪೂರ್ಣವಾಗಿ ನಾವು ಅವರನ್ನು ಸಮಾಧಿಯಂತೆ ನುಂಗಿಬಿಡೋಣ.
13ಅಮೂಲ್ಯವಾದ ಎಲ್ಲಾ ಸಂಪತ್ತನ್ನು ನಾವು ಕಂಡು ಹಿಡಿದು ಕೊಳ್ಳೆಯಿಂದ ನಮ್ಮ ಮನೆಗಳನ್ನು ತುಂಬಿ ಕೊಳ್ಳೋಣ.
14ನೀನು ನಮ್ಮ ಮಧ್ಯದಲ್ಲಿ ಚೀಟನ್ನು ಹಾಕು, ನಮ್ಮೆಲ್ಲರಿಗೂ ಒಂದೇ ಹಣದ ಚೀಲ ಇರಲಿ ಎಂದು ಹೇಳುತ್ತಾರೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ