ಯೆರೆಮಿಯ 23:27

ಅವರ ತಂದೆ ಗಳು ಬಾಳನಿಂದ ನನ್ನ ಹೆಸರನ್ನು ಹೇಗೆ ಮರೆತರೋ ಹಾಗೆಯೇ ಇವರು ತಮ್ಮ ತಮ್ಮ ನೆರೆಯವರಿಗೆ ತಿಳಿಸುವ ಕನಸುಗಳಿಂದ ನನ್ನ ಜನರು ನನ್ನ ಹೆಸರನ್ನು ಮರೆತು ಬಿಡುವಂತೆ ಮಾಡುವದಕ್ಕೆ ಯೋಚಿಸುತ್ತಾರೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 23

25ನನ್ನ ಹೆಸರಿನಲ್ಲಿ ಸುಳ್ಳನ್ನು ಪ್ರವಾದಿಸುವ ಪ್ರವಾದಿಗಳು ಹೇಳುವದನ್ನು ಕೇಳಿದ್ದೇನೆ. ಅವರು--ನಾನು ಕನಸು ಕಂಡಿದ್ದೇನೆ, ಕನಸು ಕಂಡಿದ್ದೇನೆ ಅನ್ನುತ್ತಾರೆ.

26ಸುಳ್ಳು ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಇದು ಎಷ್ಟರ ವರೆಗೆ ಇರುವದು? ಹೌದು, ಅವರು ತಮ್ಮ ಹೃದಯದ ಮೋಸವನ್ನು ಪ್ರವಾದಿಸುವವರೇ;

27ಅವರ ತಂದೆ ಗಳು ಬಾಳನಿಂದ ನನ್ನ ಹೆಸರನ್ನು ಹೇಗೆ ಮರೆತರೋ ಹಾಗೆಯೇ ಇವರು ತಮ್ಮ ತಮ್ಮ ನೆರೆಯವರಿಗೆ ತಿಳಿಸುವ ಕನಸುಗಳಿಂದ ನನ್ನ ಜನರು ನನ್ನ ಹೆಸರನ್ನು ಮರೆತು ಬಿಡುವಂತೆ ಮಾಡುವದಕ್ಕೆ ಯೋಚಿಸುತ್ತಾರೆ.

28ಕನಸು ಉಂಟಾದ ಪ್ರವಾದಿಯು ಕನಸನ್ನು ತಿಳಿಸಲಿ, ನನ್ನ ವಾಕ್ಯ ಉಂಟಾದವನು ನನ್ನ ವಾಕ್ಯವನ್ನು ನಂಬಿಗಸ್ತನಾಗಿ ಹೇಳಲಿ; ಗೋಧಿಗೂ ಹೊಟ್ಟಿಗೂ ಸಂಬಂಧವೇನೆಂದು ಕರ್ತನು ಅನ್ನುತ್ತಾನೆ.

29ನನ್ನ ವಾಕ್ಯವು ಬೆಂಕಿಯ ಹಾಗಲ್ಲವೋ ಎಂದು ಕರ್ತನು ಅನ್ನುತ್ತಾನೆ. ಅದು ಬಂಡೆಯನ್ನು ತುಂಡು ಮಾಡುವ ಸುತ್ತಿಗೆಯ ಹಾಗಲ್ಲವೋ?

ಯೆರೆಮಿಯ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी