೧ ಪೂರ್ವಕಾಲವೃತ್ತಾಂತ 18:13

ದಾವೀದನು ಎಲ್ಲಿ ಹೋದನೋ ಅಲ್ಲಿ ಕರ್ತನು ಅವನನ್ನು ರಕ್ಷಿಸಿದನು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 18

11ಇವುಗಳನ್ನು ಅರಸನಾದ ದಾವೀದನು ಎದೋಮ್ಯರು ಮೋವಾಬ್ಯರು ಅಮ್ಮೋನನ ಮಕ್ಕಳು ಫಿಲಿಷ್ಟಿಯರು ಅಮಾಲೇಕ್ಯರು ಎಂಬ ಸಕಲ ಜನಾಂಗಗಳ ಬಳಿಯಿಂದ ತೆಗೆದುಕೊಂಡು ಬಂದ ಬೆಳ್ಳಿ ಬಂಗಾರವನ್ನು ಕರ್ತನಿಗೆ ಪ್ರತಿಷ್ಠೆಮಾಡಿದನು.

12ಇದಲ್ಲದೆ, ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರೊಳಗೆ ಹದಿನೆಂಟು ಸಾವಿರ ಮಂದಿಯನ್ನು ಕೊಂದು ಎದೋಮಿನಲ್ಲಿ ಠಾಣ ಗಳನ್ನು ಇಟ್ಟನು. ಎದೋಮ್ಯರೆಲ್ಲರೂ ದಾವೀದನ ಸೇವಕರಾದರು.

13ದಾವೀದನು ಎಲ್ಲಿ ಹೋದನೋ ಅಲ್ಲಿ ಕರ್ತನು ಅವನನ್ನು ರಕ್ಷಿಸಿದನು.

14ಹೀಗೆಯೇ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ, ತನ್ನ ಸಮಸ್ತ ಜನರಿಗೆ ನ್ಯಾಯವನ್ನೂ ನೀತಿಯನ್ನೂ ನಡಿಸಿದನು.

15ಚೆರೂಯಳ ಮಗನಾದ ಯೋವಾಬನು ಸೈನ್ಯಾಧಿಪತಿಯಾಗಿದ್ದನು; ಅಹೀಲೂ ದನ ಮಗನಾದ ಯೆಹೋಷಾಫಾಟನು ಲೇಖಕ ನಾಗಿದ್ದನು.

೧ ಪೂರ್ವಕಾಲವೃತ್ತಾಂತ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी