ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಲಿತ್ತು; ಅವನು ಒಂದು ಬಾಗಲಿನಿಂದ ಮತ್ತೊಂದು ಬಾಗಲಿಗೆ ದಕ್ಷಿಣವಾಗಿ ನೂರು ಮೊಳ ಅಳೆದನು.
25ಅದರಲ್ಲಿಯೂ ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ;
26ಅದಕ್ಕೆ ಏರುವ ಹಾಗೆ ಏಳು ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರವಿತ್ತು.
27ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಲಿತ್ತು; ಅವನು ಒಂದು ಬಾಗಲಿನಿಂದ ಮತ್ತೊಂದು ಬಾಗಲಿಗೆ ದಕ್ಷಿಣವಾಗಿ ನೂರು ಮೊಳ ಅಳೆದನು.
28ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಲಿನಿಂದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ದಕ್ಷಿಣದ ಬಾಗಲನ್ನು ಅಳೆದನು;
29ಅಲ್ಲಿನ ಆ ಚಿಕ್ಕ ಕೊಠಡಿಗಳನ್ನೂ ಅದರ ಕಂಬ ಗಳನ್ನೂ ಕಮಾನುಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಅದರ ಸುತ್ತಲಿರುವ ಕಮಾ ನುಗಳಲ್ಲಿಯೂ ಕಿಟಕಿಗಳಿದ್ದವು ಅದರ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ;
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ