ನನ್ನ ಮೇಲೆಯೂ ಕರ್ತನು ನಿಮ್ಮ ದೆಸೆಯಿಂದ ಕೋಪಗೊಂಡು--ನೀನು ಸಹ ಅದರಲ್ಲಿ ಪ್ರವೇಶಿಸು ವದಿಲ್ಲ.
35ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ.
36ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಕರ್ತನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದ ಅವನು ಸಂಚರಿಸಿದ ದೇಶ ವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು.
37ನನ್ನ ಮೇಲೆಯೂ ಕರ್ತನು ನಿಮ್ಮ ದೆಸೆಯಿಂದ ಕೋಪಗೊಂಡು--ನೀನು ಸಹ ಅದರಲ್ಲಿ ಪ್ರವೇಶಿಸು ವದಿಲ್ಲ.
38ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗನಾದ ಯೆಹೋಶುವನೇ ಅದರಲ್ಲಿ ಪ್ರವೇಶಿ ಸುವನು; ಅವನಿಗೆ ಧೈರ್ಯಕೊಡು; ಅವನೇ ಅದನ್ನು ಇಸ್ರಾಯೇಲಿಗೆ ಸ್ವಾಸ್ತ್ಯವಾಗಿ ಕೊಡುವನು.
39ಇದಲ್ಲದೆ ಸುಲಿಗೆ ಆಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕವರೂ ಈಹೊತ್ತು ಮೇಲು ಕೇಡು ಅರಿಯದ ನಿಮ್ಮ ಮಕ್ಕಳೂ ಅವರೇ ಅದರಲ್ಲಿ ಪ್ರವೇಶಿಸುವರು; ಅವರಿಗೆ ಅದನ್ನು ಕೊಡುವೆನು; ಅವರು ಅದನ್ನು ಸ್ವತಂತ್ರಿಸಿಕೊಳ್ಳುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ