೨ ಸಮುವೇಲನು 21:18

ತರುವಾಯ ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿ ನಲ್ಲಿ ಯುದ್ಧ ಉಂಟಾಯಿತು. ಆಗ ಹುಷಾತನಾದ ಸಿಬ್ಬೆಕೈನು ಮಹಾಶರೀರದವನ ಮಕ್ಕಳಲ್ಲಿ ಸಫ್‌ ಎಂಬವನನ್ನು ಕೊಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 21

16ಆಗ ಮುನ್ನೂರು ಶೇಕೆಲ ತೂಕವಾದ ಹಿತ್ತಾಳೆಯ ಈಟಿಯುಳ್ಳವನಾಗಿ ಹೊಸ ಕತ್ತಿಯನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ಮಹಾ ಶರೀರದವನ ಮಕ್ಕಳಲ್ಲಿ ಇಷ್ಬೀಬೆನೋಬ್‌ನು ದಾವೀದ ನನ್ನು ಕೊಲ್ಲಬೇಕೆಂದಿದ್ದನು.

17ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.

18ತರುವಾಯ ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿ ನಲ್ಲಿ ಯುದ್ಧ ಉಂಟಾಯಿತು. ಆಗ ಹುಷಾತನಾದ ಸಿಬ್ಬೆಕೈನು ಮಹಾಶರೀರದವನ ಮಕ್ಕಳಲ್ಲಿ ಸಫ್‌ ಎಂಬವನನ್ನು ಕೊಂದನು.

19ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ಉಂಟಾದಾಗ ಬೇತ್ಲೆಹೇಮಿನವನಾದ ಯಾರೇಯೋರೆ ಗೀಮ್‌ ಎಂಬವನ ಮಗನಾಗಿರುವ ಎಲ್ಹಾನಾನನು ಗಿತ್ತಿಯನಾದ ಗೊಲ್ಯಾತನ ಸಹೋದರನನ್ನು ಕೊಂದನು. ಈ ಗೊಲ್ಯಾತನ ಈಟಿಯ ಕಟ್ಟಿಗೆಯು ನೆಯ್ಯುವವರ ದೋಣೀ ಮರಕ್ಕೆ ಸಮಾನವಾಗಿತ್ತು.

20ಗತ್‌ ಊರಿನಲ್ಲಿ ಯುದ್ಧ ಉಂಟಾದಾಗ ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು; ಅವನ ಕೈಕಾಲುಗಳ ಬೆರಳುಗಳು ಆರು ಆರಾಗಿ ಲೆಖ್ಖದಲ್ಲಿ ಇಪ್ಪತ್ತು ನಾಲ್ಕು ಆಗಿದ್ದವು. ಇವನು ಸಹ ಮಹಾಶರೀರದವನಿಗೆ ಹುಟ್ಟಿ ದನು.

೨ ಸಮುವೇಲನು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी