೧ ಪೂರ್ವಕಾಲವೃತ್ತಾಂತ 28:2

ಆಗ ಅರಸನಾದ ದಾವೀದನು ಎದ್ದು ನಿಂತು ಹೇಳಿದ್ದೇನಂದರೆ--ನನ್ನ ಸಹೋದರರೇ, ನನ್ನ ಜನರೇ, ನನ್ನ ಮಾತು ಕೇಳಿರಿ, ಕರ್ತನ ಒಡಂಬಡಿ ಕೆಯ ಮಂಜೂಷದ ನಿಮಿತ್ತವಾಗಿಯೂ ನಮ್ಮ ದೇವರ ಪಾದಪೀಠದ ನಿಮಿತ್ತವಾಗಿಯೂ ವಿಶ್ರಾಂತಿಯಾದ ಮನೆಯನ್ನು ನಾನು ಕಟ್ಟಿಸಲು ಮನಸ್ಸಾಗಿದ್ದು ಕಟ್ಟುವಿ ಕೆಯ ನಿಮಿತ್ತ ಸಿದ್ಧಮಾಡಿದೆನು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 28

1ದಾವೀದನು ಇಸ್ರಾಯೇಲಿನ ಸಮಸ್ತ ಪ್ರಧಾನರಾದ ಗೋತ್ರಗಳ ಪ್ರಧಾನ ರನ್ನೂ ವರ್ಗವರ್ಗವಾಗಿ ಅರಸನನ್ನು ಸೇವಿಸುವ ಸಭೆಗಳ ಪ್ರಧಾನರನ್ನೂ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಅರಸನ ಸ್ವಾಸ್ಥ್ಯದ ಮೇಲೆಯೂ ಅವನ ಕುಮಾರರ ಸ್ವಾಸ್ಥ್ಯಗಳ ಮೇಲೆಯೂ ಇರುವ ಪ್ರಧಾನರನ್ನೂ ಅಧಿಕಾರಿಗಳನ್ನೂ ಪರಾಕ್ರಮಶಾಲಿ ಗಳನ್ನೂ ಶೂರರನ್ನೂ ಯೆರೂಸಲೇಮಿಗೆ ಕೂಡಿ ಬರ ಮಾಡಿದನು.

2ಆಗ ಅರಸನಾದ ದಾವೀದನು ಎದ್ದು ನಿಂತು ಹೇಳಿದ್ದೇನಂದರೆ--ನನ್ನ ಸಹೋದರರೇ, ನನ್ನ ಜನರೇ, ನನ್ನ ಮಾತು ಕೇಳಿರಿ, ಕರ್ತನ ಒಡಂಬಡಿ ಕೆಯ ಮಂಜೂಷದ ನಿಮಿತ್ತವಾಗಿಯೂ ನಮ್ಮ ದೇವರ ಪಾದಪೀಠದ ನಿಮಿತ್ತವಾಗಿಯೂ ವಿಶ್ರಾಂತಿಯಾದ ಮನೆಯನ್ನು ನಾನು ಕಟ್ಟಿಸಲು ಮನಸ್ಸಾಗಿದ್ದು ಕಟ್ಟುವಿ ಕೆಯ ನಿಮಿತ್ತ ಸಿದ್ಧಮಾಡಿದೆನು.

3ಆದರೆ ದೇವರು ನನಗೆ--ನೀನು ನನ್ನ ಹೆಸರಿಗೆ ಮನೆಯನ್ನು ಕಟ್ಟಬೇಡ; ಯಾಕಂದರೆ ನೀನು ಯುದ್ಧದ ಮನುಷ್ಯನಾಗಿದ್ದೀ; ರಕ್ತವನ್ನು ಚೆಲ್ಲಿದ್ದೀ ಅಂದನು.

4ಆದರೆ ಇಸ್ರಾಯೇಲಿನ ಕರ್ತನಾದ ದೇವರು ಎಂದೆಂದಿಗೂ ಇಸ್ರಾಯೇಲಿನ ಮೇಲೆ ಅರಸನಾಗಿರಲು ನನ್ನ ತಂದೆಯ ಮನೆಯ ಸಮಸ್ತರಿಂದ ನನ್ನನ್ನು ಆದುಕೊಂಡನು. ಯಾಕಂದರೆ ನಾನು ನಾಯಕನಾಗಿರಲು ಯೆಹೂದನನ್ನೂ ಯೆಹೂ ದನ ಮನೆಯಲ್ಲಿ ನನ್ನ ತಂದೆಯ ಮನೆಯನ್ನೂ ಆದು ಕೊಂಡು ನನ್ನ ತಂದೆಯ ಕುಮಾರರಲ್ಲಿ ನನ್ನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗ ಮಾಡಲು ಚಿತ್ತ ವುಳ್ಳವನಾಗಿದ್ದನು;

೧ ಪೂರ್ವಕಾಲವೃತ್ತಾಂತ 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी