ಯೆಹೋಶುವ 14:13

ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನನ್ನು ಆಶೀರ್ವದಿಸಿ ಅವನಿಗೆ ಹೆಬ್ರೋನನ್ನು ಬಾಧ್ಯತೆ ಯಾಗಿ ಕೊಟ್ಟನು.

ಸಂದರ್ಭದೊಂದಿಗೆ ಓದಿ · ಯೆಹೋಶುವ 14

11ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲವಾಗಿ ಇದ್ದೆನೋ ಹಾಗೆಯೇ ಇದು ವರೆಗೂ ಬಲವಾಗಿದ್ದೇನೆ. ನಾನು ಯುದ್ಧಕ್ಕೆ ಹೋಗಿ ಬರುವದಕ್ಕೆ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳ ವನಾಗಿದ್ದೇನೆ.

12ಆದದರಿಂದ ಕರ್ತನು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಯಾಕಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿನದಲ್ಲಿ ಕೇಳಿದ್ದೀ. ಕರ್ತನು ನನ್ನ ಸಂಗಡ ಇದ್ದರೆ ಕರ್ತನು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಶಕ್ತನಾಗಿರುವೆನು ಅಂದನು.

13ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನನ್ನು ಆಶೀರ್ವದಿಸಿ ಅವನಿಗೆ ಹೆಬ್ರೋನನ್ನು ಬಾಧ್ಯತೆ ಯಾಗಿ ಕೊಟ್ಟನು.

14ಹೀಗೆಯೇ ಕೆನೆಜ್ಯನಾದ ಯೆಫು ನ್ನೆಯ ಮಗನಾದ ಕಾಲೇಬನು ಇಸ್ರಾಯೇಲಿನ ದೇವರಾದ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿ ದ್ದರಿಂದ ಹೆಬ್ರೋನು ಇಂದಿನ ವರೆಗೂ ಅವನ ಬಾಧ್ಯತೆ ಯಾಯಿತು.

15ಹೆಬ್ರೋನಿನ ಹೆಸರು ಮೊದಲು ಕಿರ್ಯತ್‌ಅರ್ಬ; ಈ ಹೆಸರು ಅನಾಕ್ಯರಲ್ಲಿ ಒಬ್ಬ ದೊಡ್ಡ ಮನುಷ್ಯನದು. ದೇಶವು ಯುದ್ಧವಿಲ್ಲದೆ ಶಾಂತವಾಯಿತು.

ಯೆಹೋಶುವ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी