ಯೋವೇಲ 3:3

ನನ್ನ ಜನರಿ ಗೋಸ್ಕರ ಚೀಟು ಹಾಕಿ ಹುಡುಗನನ್ನು ಸೂಳೆಗಾಗಿ ಕೊಟ್ಟು, ಹುಡುಗಿಯನ್ನು ದ್ರಾಕ್ಷಾರಸಕ್ಕಾಗಿ ಮಾರಿ ಅವರು ಕುಡಿಯುವ ಹಾಗೆ ಮಾರಿದ್ದಾರಲ್ಲಾ?

ಸಂದರ್ಭದೊಂದಿಗೆ ಓದಿ · ಯೋವೇಲ 3

1ಇಗೋ, ಆ ದಿನಗಳಲ್ಲಿಯೂ ಆ ಸಮಯದಲ್ಲಿಯೂ ನಾನು ಯೆಹೂದದ ಮತ್ತು ಯೆರೂಸಲೇಮಿನ ಸೆರೆಯನ್ನು ತಿರುಗಿಸುವಾಗ

2ಎಲ್ಲಾ ಜನಾಂಗಗಳನ್ನು ಕೂಡಿಸಿ ಯೆಹೋಷಾಫಾಟನ ತಗ್ಗಿಗೆ ಅವರನ್ನು ಇಳಿಸಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯ ಅವರ ಸಂಗಡ ವ್ಯಾಜ್ಯವಾಡುವೆನು; ಅವರು ಅವರನ್ನು ಜನಾಂಗಗಳಲ್ಲಿ ಚದರಿಸಿ ನನ್ನ ದೇಶವನ್ನು ಪಾಲಿಟ್ಟು

3ನನ್ನ ಜನರಿ ಗೋಸ್ಕರ ಚೀಟು ಹಾಕಿ ಹುಡುಗನನ್ನು ಸೂಳೆಗಾಗಿ ಕೊಟ್ಟು, ಹುಡುಗಿಯನ್ನು ದ್ರಾಕ್ಷಾರಸಕ್ಕಾಗಿ ಮಾರಿ ಅವರು ಕುಡಿಯುವ ಹಾಗೆ ಮಾರಿದ್ದಾರಲ್ಲಾ?

4ಹೌದು, ಓ ತೂರೇ, ಚೀದೋನೇ, ಪಾಲೆಸ್ತಿನದ ಎಲ್ಲಾ ಪ್ರಾಂತ್ಯಗಳೇ, ನನ್ನ ಕೂಡ ನಿಮಗೇನು? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ನನಗೆ ಸಲ್ಲಿಸಿದರೆ ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು.

5ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ ತೆಗೆದುಕೊಂಡು ನನ್ನ ಒಳ್ಳೇ ರಮ್ಯವಾದವುಗಳನ್ನು ನಿಮ್ಮ ದೇವಸ್ಥಾನಗಳಿಗೆ ತಕ್ಕೊಂಡು ಹೋಗಿದ್ದೀರಿ.

ಯೋವೇಲ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी