ಚೆಫನ್ಯ 1:15

ಆ ದಿನವು ರೌದ್ರದ ದಿನವು, ಇಕ್ಕಟ್ಟು ಸಂಕಟಗಳ ದಿನವು, ಹಾಳು ಪಾಳುಗಳ ದಿನವು, ಕತ್ತಲೆ ಮೊಬ್ಬುಗಳ ದಿನವು, ಮೇಘ ಮೋಡಗಳ ದಿನವು.

ಸಂದರ್ಭದೊಂದಿಗೆ ಓದಿ · ಚೆಫನ್ಯ 1

13ಆದದರಿಂದ ಅವರ ಸಂಪತ್ತು ಕೊಳ್ಳೆಯಾಗುವದು, ಅವರ ಮನೆಗಳು ಹಾಳಾಗು ವವು; ಅವರು ಮನೆಗಳನ್ನು ಕಟ್ಟಿ ವಾಸಮಾಡರು; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ರಸವನ್ನು ಕುಡಿಯರು.

14ಕರ್ತನ ಮಹಾದಿನವು ಸವಿಾಪವಾಗಿದೆ, ಅದು ಬಹು ತ್ವರೆಪಡುತ್ತದೆ; ಕರ್ತನ ದಿನದ ಶಬ್ದವು ತ್ವರೆ ಪಡುತ್ತದೆ; ಶೂರನು ಅಲ್ಲಿ ಘೋರವಾಗಿ ಗೋಳಿಡು ವನು.

15ಆ ದಿನವು ರೌದ್ರದ ದಿನವು, ಇಕ್ಕಟ್ಟು ಸಂಕಟಗಳ ದಿನವು, ಹಾಳು ಪಾಳುಗಳ ದಿನವು, ಕತ್ತಲೆ ಮೊಬ್ಬುಗಳ ದಿನವು, ಮೇಘ ಮೋಡಗಳ ದಿನವು.

16ಅದರ ಕೋಟೆಯುಳ್ಳ ಪಟ್ಟಣಗಳಿಗೆ ವಿರೋಧವಾಗಿಯೂ ಉನ್ನತವಾದ ಗೋಪುರಗಳಿಗೆ ವಿರೋಧವಾಗಿಯೂ ತುತೂರಿ ಅರ್ಭಟಗಳ ದಿನವು.

17ಆಗ ನಾನು ಮನುಷ್ಯರ ಮೇಲೆ ಇಕ್ಕಟ್ಟು ತರಿಸುವೆನು; ಅವರು ಕುರುಡರ ಹಾಗೆ ನಡೆಯುವರು; ಕರ್ತನಿಗೆ ವಿರೋಧವಾಗಿ ಅವರು ಪಾಪಮಾಡಿದ್ದಾರೆ; ಅವರ ರಕ್ತವು ದೂಳಿನಂತೆಯೂ ಅವರ ಮಾಂಸವು ಗೊಬ್ಬರ ದಂತೆಯೂ ಸುರಿಯಲ್ಪಡುವದು.

ಚೆಫನ್ಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी