ಅಪೊಸ್ತಲರ ಕೃತ್ಯಗಳು 19:3

ಆಗ ಅವನು ಅವರಿಗೆ--ನೀವು ಯಾವದಕ್ಕಾಗಿ ಬಾಪ್ತಿಸ್ಮ ಮಾಡಿಸಿಕೊಂಡಿರಿ ಎಂದು ಕೇಳಿದನು. ಅದಕ್ಕವರು--ಯೋಹಾನನ ಬಾಪ್ತಿಸ್ಮಕ್ಕನುಸಾರವಾಗಿ ಮಾಡಿಸಿ ಕೊಂಡೆವು ಎಂದು ಹೇಳಿದರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 19

1ಇದಾದ ಮೇಲೆ ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮೇಲ್ಭಾ ಗದ ತೀರಗಳನ್ನು ದಾಟಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡನು.

2ಅವರಿಗೆ--ನೀವು ನಂಬಿದಾಗ ಪವಿತ್ರಾತ್ಮನನ್ನು ಹೊಂದಿದಿರೋ ಎಂದು ಕೇಳಿದ್ದಕ್ಕೆ ಅವರು ಅವನಿಗೆ--ಪವಿತ್ರಾತ್ಮನು ಇದ್ದಾ ನೆಂಬದು ನಾವು ಕೇಳಲೇ ಇಲ್ಲ ಅಂದರು.

3ಆಗ ಅವನು ಅವರಿಗೆ--ನೀವು ಯಾವದಕ್ಕಾಗಿ ಬಾಪ್ತಿಸ್ಮ ಮಾಡಿಸಿಕೊಂಡಿರಿ ಎಂದು ಕೇಳಿದನು. ಅದಕ್ಕವರು--ಯೋಹಾನನ ಬಾಪ್ತಿಸ್ಮಕ್ಕನುಸಾರವಾಗಿ ಮಾಡಿಸಿ ಕೊಂಡೆವು ಎಂದು ಹೇಳಿದರು.

4ಆಗ ಪೌಲನು--ನಿಜವಾಗಿಯೂ ಯೋಹಾನನು ತನ್ನ ಹಿಂದೆ ಬರುವಾತ ನನ್ನು ಅಂದರೆ ಕ್ರಿಸ್ತ ಯೇಸುವನ್ನು ನಂಬಬೇಕೆಂದು ಜನರಿಗೆ ಹೇಳಿ ಮಾನಸಾಂತರದ ಬಾಪ್ತಿಸ್ಮದಿಂದ ಬಾಪ್ತಿಸ್ಮ ಮಾಡಿಸಿದನು ಎಂದು ಹೇಳಿದನು.

5ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡರು.

ಅಪೊಸ್ತಲರ ಕೃತ್ಯಗಳು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी