ಯಾಜಕಕಾಂಡ 17:11

ಯಾಕಂದರೆ ಪ್ರತಿ ದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮ ಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರ ವಾಗಿರುವ ಕಾರಣ ಅದರಿಂದ ದೋಷಪರಿಹಾರ ವಾಗುತ್ತದಷ್ಟೆ.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 17

9ಅದನ್ನು ಕರ್ತನಿಗೆ ಸಮರ್ಪಿಸುವಂತೆ ಸಭೆಯ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ ಆ ಮನುಷ್ಯನು ತನ್ನ ಜನಗಳ ಮಧ್ಯ ದೊಳಗಿಂದ ತೆಗೆದುಹಾಕಲ್ಪಡಬೇಕು.

10ಇದಲ್ಲದೆ ಇಸ್ರಾಯೇಲ್‌ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾ ದರೂ ಯಾವದೇ ತರದ ರಕ್ತವನ್ನು ತಿಂದರೆ ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.

11ಯಾಕಂದರೆ ಪ್ರತಿ ದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮ ಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರ ವಾಗಿರುವ ಕಾರಣ ಅದರಿಂದ ದೋಷಪರಿಹಾರ ವಾಗುತ್ತದಷ್ಟೆ.

12ಆದಕಾರಣ ನಿಮ್ಮಲ್ಲಿ ಯಾವನಾ ದರೂ ರಕ್ತವನ್ನು ತಿನ್ನಬಾರದೆಂದು ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನು ರಕ್ತವನ್ನು ತಿನ್ನಬಾರ ದೆಂದು ನಾನು ಇಸ್ರಾಯೇಲ್‌ ಮಕ್ಕಳಿಗೆ ಹೇಳಿದೆನು.

13ಇದಲ್ಲದೆ ಇಸ್ರಾಯೇಲ್‌ ಮಕ್ಕಳಲ್ಲಿ ಯಾವ ಮನುಷ್ಯನಾದರೂ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ ತಿನ್ನುವದಕ್ಕಾಗಿ ಬೇಟೆಯಾಡಿ ಯಾವದೇ ಪಶುವನ್ನಾಗಲಿ ಇಲ್ಲವೆ ಪಕ್ಷಿಯನ್ನಾಗಲಿ ಹಿಡಿದರೆ ಅದರ ರಕ್ತವನ್ನೆಲ್ಲಾ ಸುರಿದು ಅದನ್ನು ಮಣ್ಣಿ ನಿಂದ ಮುಚ್ಚಬೇಕು.

ಯಾಜಕಕಾಂಡ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी