ನ್ಯಾಯಸ್ಥಾಪಕರು 20:36

ಹೀಗೆ ಬೆನ್ಯಾವಿಾನನ ಮಕ್ಕಳು ತಾವು ಹೊಡೆಯಲ್ಪಟ್ಟಿದೇವೆಂದು ಕಂಡರು; ಯಾಕಂದರೆ ಇಸ್ರಾಯೇಲ್‌ ಮನುಷ್ಯರು ಗಿಬೆಯದ ಬಳಿಯಲ್ಲಿ ಹೊಂಚು ಹಾಕುವದಕ್ಕೆ ಇಟ್ಟವರನ್ನು ನಂಬಿದ್ದದರಿಂದ ಬೆನ್ಯಾವಿಾನ್ಯರಿಗೆ ಸ್ಥಳವನ್ನು ಕೊಟ್ಟರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 20

34ಅವರಲ್ಲಿ ಆದುಕೊಳ್ಳಲ್ಪಟ್ಟ ಹತ್ತು ಸಾವಿರ ಮನುಷ್ಯರು ಗಿಬೆಯಕ್ಕೆ ವಿರೋಧವಾಗಿ ಬಂದರು. ಯುದ್ಧವು ಘೋರವಾಗಿತ್ತು.

35ಆದರೆ ಅವರು ತಮಗೆ ಕೇಡು ಸವಿಾಪವಾಗಿತ್ತೆಂದು ಅರಿಯದೆ ಇದ್ದರು. ಆಗ ಕರ್ತನು ಇಸ್ರಾಯೇಲಿನ ಮುಂದೆ ಬೆನ್ಯಾವಿಾನನನ್ನು ಹೊಡೆದನು. ಆ ದಿನದಲ್ಲಿ ಇಸ್ರಾಯೇಲ್‌ ಮಕ್ಕಳು ಬೆನ್ಯಾವಿಾನ್ಯರಲ್ಲಿ ಕತ್ತಿ ಹಿಡಿ ಯುವವರಾದ ಇಪ್ಪತ್ತೈದು ಸಾವಿರದ ನೂರು ಮನುಷ್ಯ ರನ್ನು ನಾಶಮಾಡಿದರು.

36ಹೀಗೆ ಬೆನ್ಯಾವಿಾನನ ಮಕ್ಕಳು ತಾವು ಹೊಡೆಯಲ್ಪಟ್ಟಿದೇವೆಂದು ಕಂಡರು; ಯಾಕಂದರೆ ಇಸ್ರಾಯೇಲ್‌ ಮನುಷ್ಯರು ಗಿಬೆಯದ ಬಳಿಯಲ್ಲಿ ಹೊಂಚು ಹಾಕುವದಕ್ಕೆ ಇಟ್ಟವರನ್ನು ನಂಬಿದ್ದದರಿಂದ ಬೆನ್ಯಾವಿಾನ್ಯರಿಗೆ ಸ್ಥಳವನ್ನು ಕೊಟ್ಟರು.

37ಆಗ ಹೊಂಚುಹಾಕಿಕೊಂಡಿದ್ದವರು ತೀವ್ರವಾಗಿ ಗಿಬೆಯಕ್ಕೆ ಹೋದರು. ಹೊಂಚುಹಾಕಿದ್ದವರು ಸಾಲಾಗಿ ಹೊರಟು ಪಟ್ಟಣದಲ್ಲಿರುವವರೆಲ್ಲರನ್ನು ಕತ್ತಿಯಿಂದ ಹೊಡೆದರು.

38ಇಸ್ರಾಯೇಲ್‌ ಮನುಷ್ಯರು ಹೊಂಚು ಹಾಕಿಕೊಂಡಿದ್ದವರ ಸಂಗಡ ನೇಮಿಸಿಕೊಂಡ ಗುರುತೇ ನಂದರೆ, ಪಟ್ಟಣದಲ್ಲಿಂದ ಮಹಾದೊಡ್ಡ ಹೊಗೆಯನ್ನು ಏಳಮಾಡುವದೇ.

ನ್ಯಾಯಸ್ಥಾಪಕರು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी