ಯೆಹೆಜ್ಕೇಲನು 39:19

ನಾನು ನಿಮಗೋಸ್ಕರ ಅರ್ಪಿಸಿದ ನನ್ನ ಯಜ್ಞದಲ್ಲಿ ನಿಮಗೆ ತೃಪ್ತಿಯಾಗುವ ವರೆಗೂ ಕೊಬ್ಬನ್ನು ತಿಂದು ಮತ್ತೇರುವ ವರೆಗೂ ರಕ್ತವನ್ನು ಕುಡಿಯಬಹುದು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 39

17ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮನುಷ್ಯಪುತ್ರನೇ, ನೀನು ಪ್ರತಿಯೊಂದು ರೀತಿಯ ಪಕ್ಷಿಗಳಿಗೂ ಮತ್ತು ಬಯಲಿನ ಪ್ರತಿಯೊಂದು ಪ್ರಾಣಿ ಗಳಿಗೂ ಮಾತನಾಡಿ--ಒಟ್ಟಾಗಿ ಬನ್ನಿರಿ. ನಾನು ನಿಮ ಗಾಗಿ ಅರ್ಪಿಸುವ ನನ್ನ ಯಜ್ಞಕ್ಕೋಸ್ಕರ ಪ್ರತಿಯೊಂದು ಕಡೆಯಿಂದಲೂ ಸೇರಿರಿ; ಇದು ಇಸ್ರಾಯೇಲ್‌ ಪರ್ವತಗಳ ಮೇಲೆ ನಡೆಯುವ ಮಹಾಯಜ್ಞವಾಗಿದೆ. ನೀವು ಮಾಂಸವನ್ನು ತಿಂದು ರಕ್ತವನ್ನು ಕುಡಿಯ ಬಹುದು.

18ನೀವು ಶೂರರ ಮಾಂಸವನ್ನು ತಿನ್ನುವಿರಿ ಮತ್ತು ಭೂಮಿಯ ಪ್ರಭುಗಳ ಟಗರು ಕುರಿಮರಿ ಹೋತ ಮತ್ತು ಹೋರಿಗಳ ಬಾಷಾನಿನ ಕೊಬ್ಬಿದ ಪಶು ಇವೆಲ್ಲವುಗಳ ರಕ್ತವನ್ನು ಕುಡಿಯುವಿರಿ.

19ನಾನು ನಿಮಗೋಸ್ಕರ ಅರ್ಪಿಸಿದ ನನ್ನ ಯಜ್ಞದಲ್ಲಿ ನಿಮಗೆ ತೃಪ್ತಿಯಾಗುವ ವರೆಗೂ ಕೊಬ್ಬನ್ನು ತಿಂದು ಮತ್ತೇರುವ ವರೆಗೂ ರಕ್ತವನ್ನು ಕುಡಿಯಬಹುದು.

20ಹೀಗೆ ನೀವು ನನ್ನ ಮೇಜಿನಲ್ಲಿ ಕುದುರೆಗಳಿಂದಲೂ ರಥಗಳಿಂದಲೂ ಶೂರರಿಂದಲೂ ಯುದ್ಧದ ಎಲ್ಲಾ ಮನುಷ್ಯರಿಂದಲೂ ತುಂಬುವಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.

21ನಾನು ನನ್ನ ಮಹಿಮೆಯನ್ನು ಅನ್ಯಜನಾಂಗಗಳಲ್ಲಿ ಸ್ಥಾಪಿಸುತ್ತೇನೆ; ಎಲ್ಲಾ ಅನ್ಯಜನಾಂಗಗಳು ನಾನು ನಡೆಸಿದ ನನ್ನ ನ್ಯಾಯತೀರ್ಪನ್ನು ಮತ್ತು ಅವರ ಮೇಲೆ ಇರಿಸಿದ ನನ್ನ ಕೈಯನ್ನು ನೋಡುವವು.

ಯೆಹೆಜ್ಕೇಲನು 39 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी